ಮಂಗಳೂರು, ಜುಲೈ 11, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಎರಡು ದಿನ ಹವಾಮಾನ ಇಲಾಖೆ ಮತ್ತೆ ರೆಡ್ ಎಲರ್ಟ್ ಘೋಷಿಸಿದ ಹಿನ್ನಲೆಯಲ್ಲಿ ಜುಲೈ 11ರ ಸೋಮವಾರ ಕೂಡಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಆದೇಶಿಸಿದ್ದಾರೆ. ಆದರೆ ಎಲ್ಲಾ ಪದವಿ ಪೂರ್ವ, ಪದವಿ ಹಾಗೂ ಇತರೆ ವೃತ್ತಿಪರ ಕೋರ್ಸ್ ಗಳು ಸೋಮವಾರದಿಂದ ಪುನರಾರಂಭಗೊಳ್ಳಲಿದೆ ಎಂದಿದ್ದಾರೆ.
ಈಗಾಗಲೆ ವಾರಪೂರ್ತಿ ನೀಡಲಾಗಿರುವ ರಜೆ ಹಿನ್ನಲೆಯಲ್ಲಿ ಪಠ್ಯಗಳನ್ನು ಸರಿದೂಗಿಸಲು ಶನಿವಾರ ಪೂರ್ಣ ತರಗತಿ ನಡೆಸಲು ಹಾಗೂ ದಸರಾ ರಜಾ ಸಂದರ್ಭದಲ್ಲೂ ತರಗತಿ ನಡೆಸಲು ಶಿಕ್ಷಣ ಇಲಾಖೆ ಕ್ರಮ ವಹಿಸುವಂತೆ ಡೀಸಿ ಸೂಚಿಸಿದ್ದಾರೆ.
ಮುಂದಿನ ದಿನಗಳಲ್ಲಿ ಮತ್ತೆ ಮಳೆ ಅಬ್ಬರ ಮುಂದುವರಿದು ರಜೆ ಘೋಷಿಸುವ ಅನಿವಾರ್ಯತೆ ಉಂಟಾದರೆ ಜಿಲ್ಲಾದ್ಯಂತ ರಜೆ ನೀಡುವುದರ ಬದಲಾಗಿ ಮಳೆ ಪ್ರಮಾಣ ತೀರಾ ಹೆಚ್ಚಾಗಿರುವ ಹಾಗೂ ತರಗತಿಗೆ ಹಾಜರಾಲು ತೊಂದರೆಯಾಗುವ ಕಡೆ ಮಾತ್ರ ರಜೆ ಘೋಷಿಸಲು ಆಯಾ ಶಾಲಾಡಳಿತ ಮಂಡಳಿಗೆ ಅಧಿಕಾರ ನೀಡಲಾಗುವುದು ಎಂದು ಡಿಸಿ ಇದೇ ವೇಳೆ ಆದೇಶದಲ್ಲಿ ತಿಳಿಸಿದ್ದಾರೆ.
0 comments:
Post a Comment