ಪುತ್ತೂರು, ಜುಲೈ 16, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಸ್ಬಾ ಗ್ರಾಮದ ನಂದಿಲ ಎಂಬಲ್ಲಿ ಶುಕ್ರವಾರ ಸಂಜೆ ಗಾಂಜಾ ಸೇವನೆ ಮಾಡಿ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ದಾಳಿ ನಡೆಸಿದ ಪುತ್ತೂರು ನಗರ ಪಿಎಸ್ಸೈ ರಾಜೇಶ್ ಕೆ ವಿ ನೇತೃತ್ವದ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪುತ್ತೂರು ತಾಲೂಕು ಒಳಮೊಗ್ರು ಗ್ರಾಮದ ಪರ್ಪುಂಜ ನಿವಾಸಿ ನಂದಕಿರಣ ಶೆಟ್ಟಿ ಅವರ ಪುತ್ರ ಕನಿಷ್ಕ ಶೆಟ್ಟಿ (25), ಕಸ್ಬಾ ಗ್ರಾಮದ ಬಪ್ಪಳಿಗೆ-ಕರ್ಕುಂಜ ನಿವಾಸಿ ಎಂ ಕೃಷ್ಣ ಅವರ ಪುತ್ರ ಪ್ರಜ್ವಲ (28), ಕೊಡಿಪ್ಪಾಡಿ ಗ್ರಾಮದ ದ್ವಾರಕಾ ಮನೆ ನಿವಾಸಿ ಸುರೇಶ್ ನಾಯ್ಕ ಅವರ ಪುತ್ರ ಹಿತೇಶ್ ನಾಯ್ಕ್ (19), ಪುತ್ತೂರು ಕಸ್ಬಾ ಗ್ರಾಮದ ಹಾರಾಡಿ-ನಂದಿಲ ಮನೆ ನಿವಾಸಿ ಸುಧಾಕರ ಅವರ ಪುತ್ರ ನವನೀತ್ ಎಸ್ ಬಿ (23) ಹಾಗೂ ಬನ್ನೂರು ಗ್ರಾಮದ ಶಿವಪಾರ್ವತಿ ಮಂದಿರ ಬಳಿ ನಿವಾಸಿ ಹರೀಶ್ ಅವರ ಪುತ್ರ ಕಿಶನ್ ಕುಮಾರ್ (24) ಎಂದು ಹೆಸರಿಸಲಾಗಿದೆ.
ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 63/22 ಕಲಂ 27(ಬಿ) ಎನ್.ಡಿ.ಪಿ.ಎಸ್ ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ.
0 comments:
Post a Comment