ಪುತ್ತೂರು ಪೊಲೀಸರ ಕಾರ್ಯಾಚರಣೆ : ಕಾಸರಗೋಡು ಮೂಲದ ಸರ ಹಾಗೂ ಬೈಕ್ ಕಳ್ಳರ ಬಂಧನ - Karavali Times ಪುತ್ತೂರು ಪೊಲೀಸರ ಕಾರ್ಯಾಚರಣೆ : ಕಾಸರಗೋಡು ಮೂಲದ ಸರ ಹಾಗೂ ಬೈಕ್ ಕಳ್ಳರ ಬಂಧನ - Karavali Times

728x90

22 July 2022

ಪುತ್ತೂರು ಪೊಲೀಸರ ಕಾರ್ಯಾಚರಣೆ : ಕಾಸರಗೋಡು ಮೂಲದ ಸರ ಹಾಗೂ ಬೈಕ್ ಕಳ್ಳರ ಬಂಧನ

ಪುತ್ತೂರು, ಜುಲೈ 22, 2022 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ನಿಡ್ಪಳ್ಳಿ ಗ್ರಾಮದ ಚೂರಿಪದವು ನಿವಾಸಿ ಶ್ರೀಮತಿ ರತ್ನಾ ಕೋಂ ಶೀನ ನಾಯ್ಕ ಅವರು ಕಳೆದ ಜೂನ್ 7 ರಂದು ಬೆಟ್ಟಂಪಾಡಿ ಗ್ರಾಮದ ಕೋನಡ್ಕ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕೆಂಪು ಬಣ್ಣದ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ಯುವಕರು ಕುತ್ತಿಗೆಯಲ್ಲಿ ಚಿನ್ನದ ಕರಿಮಣಿ ಸರ ಎಗರಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಪುತ್ತೂರು ಗ್ರಾಮಾಂತರ ಪೊಲೀಸರು ಆರೋಪಿಗಳಾದ ಕೇರಳ ರಾಜ್ಯ ಕಾಸರಗೋಡು ಜಿಲ್ಲೆಯ ಕುಂಬ್ಲೆ-ಬಂಬ್ರಾಣ ಸಮೀಪದ ಲಕ್ಷಂವೀಡು ಕಾಲೊನಿ ನಿವಾಸಿ ಬಡುವ ಕುಂಞÂ ಎಂಬವರ ಪುತ್ರ ಫಝಲ್ ಎ ಅಲಿಯಾಸ್ ಫೈಝಲ್ ಅಲಿಯಾಸ್ ಪಗ್ಗು (37) ಹಾಗೂ ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಸಮೀಪದ ರಾಜೀವ ಗಾಂಧಿ ಕಾಲೊನಿ ನಿವಾಸಿ ದಿವಂಗತ ಸೈಯದ್ ಜಮಾಲ್ ಎಂಬವರ ಪುತ್ರ ಅಬ್ದುಲ್ ನಿಝಾರ್ (19) ಎಂಬವರನ್ನು ಬಂಧಿಸುವಲ್ಲಿ ಸಫಲರಾಗಿದ್ದು, ಬಂಧಿತರಿಂದ ಕಳವಾದ ಚಿನ್ನಾಭರಣ ಹಾಗೂ ಬೈಕ್ ಗಳನ್ನು ವಶಡಪಸಿಕೊಂಡದ್ದಲ್ಲದೆ ಇತರ ಹಲವು ಪ್ರಕರಣಗಳನ್ನು ಬೇಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ ಪೊಲೀಸರು 50 ಸಾವಿರ ರೂಪಾಯಿ ಮೌಲ್ಯದ ತುಂಡಾ ಚಿನ್ನದ ಕರಿಮಣಿ ಸರ, ಪ್ರಕರಣದಲ್ಲಿ ಉಪಯೋಗಿಸಿದ ಕೆಂಪು ಬಣ್ಣದ ರಾಯಲ್ ಎನ್‍ಫೀಲ್ಡ್ ಬೈಕ್ ಹಾಗೂ ಬದಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿದ ಎಫ್ ಝಡ್ ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. 

ಆರೋಪಿಗಳು 2019 ರಲ್ಲಿ ವಿಟ್ಲ ಠಾಣಾ ವ್ಯಾಪ್ತಿಯ ಕುದ್ದುಪದವು ನಿವಾಸಿ ಜಗನ್ನಾಥ ಶೆಟ್ಟಿ ಅವರ ಮಾಲಕತ್ವದ ಪೆಟ್ರೋಲ್ ಪಂಪ್ ಕಳ್ಳತÀ ಪ್ರಕರಣ ಹಾಗೂ ಕಾಶಿಮಠ ಎಂಬಲ್ಲಿ ಗೂಡ್ಸ್ ಟೆಂಪೋ ಕಳ್ಳತನ ಪ್ರಕರಣ, ಪುತ್ತೂರು ಠಾಣಾ ವ್ಯಾಪ್ತಿಯ ಬೈಪಾಸ್ ರಸ್ತೆಯಲ್ಲಿ ಮಹಿಳೆಯ ಸರ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದಾರೆ ಎಂದು ಪೊಲೀಸರು ತನಿಖೆ ವೇಳೆ ಕಂಡುಕೊಂಡಿದ್ದಾರೆ. 

ಆರೋಪಿಗಳ ಪೈಕಿ ಫಝಲ್ ವಿರುದ್ದ ಮಂಗಳೂರು ನಗರದ ಉಳ್ಳಾಲ, ಮಂಜೇಶ್ವರ, ಕುಂಬ್ಲೆ, ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ, ಅಡಿಶನಲ್ ಎಸ್ಪಿ ಕುಮಾರ್ ಚಂದ್ರ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಎಎಸ್ಪಿ ಡಾ ಗಾನಾ ಪಿ ಕುಮಾರ್ ಅವರ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಇನ್ಸ್‍ಪೆಕ್ಟರ್ ಉಮೇಶ್ ಯು, ಪುತ್ತೂರು ಗ್ರಾಮಾಂತರ ಪಿಎಸ್ಸೈಗಳಾದ ಉದಯರವಿ ಎಂ ವೈ ಹಾಗೂ ರಾಮಕೃಷ್ಣ ಜಿ ಸಿ ಅವರ ಮುಂದಾಳುತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಠಾಣಾ ಸಿಬ್ಬಂದಿಗಳಾದ ದೇವರಾಜ್, ಧರ್ಣಪ್ಪ ಗೌಡ, ಅದ್ರಾಮ್, ಸತೀಶ್, ಪ್ರವೀಣ್ ರೈ, ವರ್ಗೀಸ್, ಜಗದೀಶ್, ಹರ್ಷಿತ್, ಚಾಲಕ ಸದ್ದಾಂ ಮುಲ್ಲಾ ಹಾಗೂ ಜಿಲ್ಲಾ ಗಣಕ ಯಂತ್ರ ಸಿಬ್ಬಂದಿಗಳಾದ ಸಂಪತ್, ದಿವಾಕರ ಅವರು ಪಾಲ್ಗೊಂಡಿದ್ದರು. 

  • Blogger Comments
  • Facebook Comments

0 comments:

Post a Comment

Item Reviewed: ಪುತ್ತೂರು ಪೊಲೀಸರ ಕಾರ್ಯಾಚರಣೆ : ಕಾಸರಗೋಡು ಮೂಲದ ಸರ ಹಾಗೂ ಬೈಕ್ ಕಳ್ಳರ ಬಂಧನ Rating: 5 Reviewed By: karavali Times
Scroll to Top