ಮಂಗಳೂರು, ಜುಲೈ 08, 2022 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗದಿಂದ ವಿಭಾಗೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ 89 ಅಂಚೆ ಸಿಬ್ಬಂದಿಗಳಿಗೆ ಶುಕ್ರವಾರ ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರಶಸ್ತಿ ವಿತರಣೆ ಮಾಡಿ ಗೌರವಿಸಲಾಯಿತು.
ಅತ್ಯಧಿಕ ಅಂಚೆ ಉಳಿತಾಯ ಖಾತೆ, ಪ್ರಧಾನ ಮಂತ್ರಿ ಸುರಕ್ಷಾ ಯೋಜನೆ, ಅಂಚೆ ಜೀವ ವಿಮೆ, ಐಪಿಪಿಬಿ ಖಾತೆ, ತ್ವರಿತ ಅಂಚೆ, ಆಧಾರ್ ನೋಂದಣೆ/ ತಿದ್ದುಪಡಿ ಸೇವೆ, ಸಾವರಿನ್ ಗೋಲ್ಡ್ ಬಾಂಡ್ ಹಾಗೂ ಇನ್ನೂ ಅನೇಕ ಸೇವೆಗಳ ಮೂಲಕ ಗರಿಷ್ಠ ವ್ಯವಹಾರಗೈದ ಸಾಧಕರಿಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಈ ಪ್ರಶಸ್ತಿ ವಿತರಿಸಿ ಗೌರವಿಸಿದರು.
ಮಂಗಳೂರು ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ಪ್ರಶಸ್ತಿ ಪಡೆದ ಸಿಬ್ಬಂದಿಗಳನ್ನು ಅಭಿನಂದಿಸಿದರು.ಮಂಗಳೂರು ವಿಭಾಗೀಯ ಅಂಚೆ ಕಛೇರಿಯ ಸಿಬ್ಬಂದಿಗಳಾದ ಪ್ರತಿಭಾ ಶೇಟ್ ಪ್ರಾರ್ಥಿಸಿ, ದಿವಾಕರ ಪ್ರಶಸ್ತಿ ವಿಜೇತರ ಪಟ್ಟಿ ವಾಚಿಸಿದರು. ಮಂಗಳೂರು ಸಹಾಯಕ ಅಂಚೆ ನಿರೀಕ್ಷಕ ಶ್ರೀನಾಥ ಎನ್ ಬಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ಪೂರ್ವ ಉಪ ವಿಭಾಗದ ಸಹಾಯಕ ಅಂಚೆ ನಿರೀಕ್ಷಕ ಸಿ ಪಿ ಹರೀಶ್ ವಂದಿಸಿದರು.
0 comments:
Post a Comment