ಕೊರೋನಾ ಬಳಿಕ ಇದೀಗ ದ.ಕ. ಜಿಲ್ಲೆಯಲ್ಲಿ ಮತೀಯ ದ್ವೇಷದ ಕಾರಣಕ್ಕಾಗಿ ಮತ್ತೆ ನೈಟ್ ಕಫ್ರ್ಯೂ ಜಾರಿ - Karavali Times ಕೊರೋನಾ ಬಳಿಕ ಇದೀಗ ದ.ಕ. ಜಿಲ್ಲೆಯಲ್ಲಿ ಮತೀಯ ದ್ವೇಷದ ಕಾರಣಕ್ಕಾಗಿ ಮತ್ತೆ ನೈಟ್ ಕಫ್ರ್ಯೂ ಜಾರಿ - Karavali Times

728x90

29 July 2022

ಕೊರೋನಾ ಬಳಿಕ ಇದೀಗ ದ.ಕ. ಜಿಲ್ಲೆಯಲ್ಲಿ ಮತೀಯ ದ್ವೇಷದ ಕಾರಣಕ್ಕಾಗಿ ಮತ್ತೆ ನೈಟ್ ಕಫ್ರ್ಯೂ ಜಾರಿ

ಮಂಗಳೂರು, ಜುಲೈ 29, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಮತ್ತೆ ನೈಟ್ ಕಫ್ರ್ಯೂ ಜಾರಿಯಾಗುತ್ತಿದೆ. ಈ ಬಾರಿ ನೈಟ್ ಕಫ್ರ್ಯೂ ಜಾರಿಯಾಗುತ್ತಿರುವುದು ಮಾತ್ರ ಜಿಲ್ಲೆಯಲ್ಲಿ ಉಂಟಾಗಿರುವ ಕೋಮವಾದಿ ಘಟನೆಗಳಿಂದ ಜರ್ಝರಿತಗೊಂಡಿರುವ ಕಾರಣಕ್ಕಾಗಿ. 

ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಉಂಟಾಗಿರುವ ಕೋಮು ಉದ್ವಿಗ್ನತೆಯ ಹಿನ್ನಲೆಯಲ್ಲಿ ಜುಲೈ 29 (ಇಂದು) ಶುಕ್ರವಾರ ಸಂಜೆ 6 ಗಂಟೆಯಿಂದ ಆಗಸ್ಟ್ 1 ರ ಸೋಮವಾರದವರೆಗೆ ರಾತ್ರಿ ಕಫ್ರ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ ವಿ ಆದೇಶ ಹೊರಡಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲೂ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅಂಗಡಿ ತೆರೆದು ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಸಂಜೆ 6 ಗಂಟೆಯ ಮುಂಚಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಡೀಸಿ ಆದೇಶಿಸಿದ್ದಾರೆ. ಅದೇ ರೀತಿ ಅನಾವಶ್ಯಕವಾಗಿ ಜನ ಹಾಗೂ ವಾಹನ ಸಂಚಾರವನ್ನೂ ನಿರ್ಬಂಧಿಸಲಾಗಿದೆ. ಆದರೆ, ತುರ್ತು ಸೇವೆಗಳು, ಆಸ್ಪತ್ರೆ ಹಾಗೂ ಮೆಡಿಕಲ್ ಶಾಪ್ ಗಳಿಗೆ ಈ ನಿರ್ಬಂಧಗಳಿಂದ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ಬಳಿಕ ಇದೀಗ ದ.ಕ. ಜಿಲ್ಲೆಯಲ್ಲಿ ಮತೀಯ ದ್ವೇಷದ ಕಾರಣಕ್ಕಾಗಿ ಮತ್ತೆ ನೈಟ್ ಕಫ್ರ್ಯೂ ಜಾರಿ Rating: 5 Reviewed By: karavali Times
Scroll to Top