ಮಂಗಳೂರು, ಜುಲೈ 16, 2022 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆಯು ರಾಷ್ಟ್ರೀಯ ಮಟ್ಟದಲ್ಲಿ “ನನ್ನ ದೃಷ್ಟಿಯಲ್ಲಿ 2047 ರ ಭಾರತ-ವಿಷನ್ 2047” (Vision for India 2047 under the “Vision 2047”) ಸ್ಪರ್ಧೆಯನ್ನು ಏರ್ಪಡಿಸಿದ್ದು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಿದೆ.
ಸ್ಪರ್ಧೆಯು 01.01.2022 ಗೆ ಅನ್ವಯವಾಗುವಂತೆ 18 ವರ್ಷದ ಒಳಗಡೆ ವಯಸ್ಸಿನವರ ಹಾಗೂ 18 ವರ್ಷ ಮೇಲಿನ ವಯಸ್ಸಿನವರ 2 ವಿಭಾಗಗಳನ್ನು ಒಳಗೊಂಡಿರುತ್ತದೆ. ಇನ್ ಲ್ಯಾಂಡ್ ಕಾರ್ಡ್ ಉಪಯೋಗಿಸಿ (500 ಪದಗಳು ಮೀರದ ಹಾಗೆ), ಅಥವಾ ಎನ್ವಲಪ್ ನಲ್ಲಿ (ಲಕೋಟೆ ಎ4 ಗಾತ್ರದ ಕಾಗದದಲ್ಲಿ 1000 ಮೀರದ ಹಾಗೆ) ತಮ್ಮ ಪತ್ರವನ್ನು ``ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು -575002'’ ಈ ವಿಳಾಸಕ್ಕೆ ಕಳುಹಿಸಬೇಕು.
ಕಳುಹಿಸುವವರ ವಿಳಾಸವು ಕಡ್ದಾಯವಾಗಿದ್ದು, ಶೀರ್ಷಿಕೆ “Entry for Dhai Akar 2022-23'’ ಎಂದು ಲಕೋಟೆಯ ಮೇಲೆ ನಮೂದಿಸಬೇಕಾಗುತ್ತದೆ. ಇಂಗ್ಲೀಷ್/ ಹಿಂದಿ/ ಯಾವುದೇ ಸ್ಥಳೀಯ ಭಾಷೆಯಲ್ಲಿ ತಮ್ಮ ಲೇಖನವನ್ನು ಬರೆಯಬಹುದು. ಕಾಗದವನ್ನು ಅಂಚೆಗೆ ಹಾಕಲು ಕೊನೆಯ ದಿನಾಂಕ 31.10.2022 ಆಗಿರುತ್ತದೆ.
ರಾಜ್ಯಮಟ್ಟದ ವಿಭಾಗದಲ್ಲಿ ಪ್ರಥಮ ಬಹುಮಾನ 25 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 10 ಸಾವಿರ ರೂಪಾಯಿ, ತೃತೀಯ ಬಹುಮಾನ 5 ಸಾವಿರ ರೂಪಾಯಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಬಹುಮಾನ 50 ಸಾವಿರ ರೂಪಾಯಿ, ದ್ವಿತೀಯ ಬಹುಮಾನ 25 ಸಾವಿರ ರೂಪಾಯಿ ಹಾಗೂ ತೃತೀಯ ಬಹುಮಾನ 10 ಸಾವಿರ ರೂಪಾಯಿ ಒಳಗೊಂಡಿರುತ್ತದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಅಂಚೆ ಕಚೇರಿ ಅಥವಾ ಇಲಾಖಾ ವೆಬ್ ಸೈಟ್ www.indiapost.gov.in ಗೆ ಭೇಟಿ ನೀಡಬಹುದು ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment