ಮೈಸೂರು, ಜುಲೈ 22, 2022 (ಕರಾವಳಿ ಟೈಮ್ಸ್) : ಮೈಸೂರು-ಶ್ರೀರಂಗ ಪಟ್ಟಣದಲ್ಲಿ ಅಂತ್ಯ ವಿಶ್ರಮ ಹೊಂದುತ್ತಿರುವ ಹಝ್ರತ್ ಖ್ವಾಜಾ ಅನ್ವರ್ ಅಲಿ ಶಾ ಚಿಶ್ತಿ (ಖ.ಸಿ.) ಅವರ 19ನೇ ಸಂದಲ್ ಕಾರ್ಯಕ್ರಮವು ಜುಲೈ 25 ರಂದು ಸೋಮವಾರ ನಡೆಯಲಿದೆ.
ಶ್ರೀರಂಗಪಟ್ಟಣದ ಗಂಜಾಂನಲ್ಲಿ ಅಸರ್ ನಮಾಝ್ ಬಳಿಕ ಸಂದಲ್ ಕಾರ್ಯಕ್ರಮದ ನಡೆಯಲಿದ್ದು, ಅತಾಯೇ ರಸೂಲ್ ಮೂವ್‍ಮೆಂಟ್ ಮೈಸೂರು ಇದರ ಅಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಮೈಸೂರು ಅವರು ನೇತೃತ್ವ ವಹಿಸಲಿದ್ದಾರೆ. ಕಾರ್ಯಕ್ರಮದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನದಾನ ನಡೆಯಲಿದ್ದು, ವಿವಿಧ ಸೂಫಿ ಹಾಗೂ ಶರಣ ಸಂತರು, ಧಾರ್ಮಿಕ, ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಮೂವ್ ಮೆಂಟ್ ಪ್ರಕಟಣೆ ತಿಳಿಸಿದೆ.
0 comments:
Post a Comment