ಬಂಟ್ವಾಳ, ಜುಲೈ 26, 2022 (ಕರಾವಳಿ ಟೈಮ್ಸ್) : ತಾಲೂಕಿನ ನಲ್ಕೆಮಾರ್ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಗಿಲ್ ವಿಜಯ ದಿನವನ್ನು ಮಂಗಳವಾರ ಆಚರಿಸಲಾಯಿತು.
ಪುಟಾಣಿ ವಿದ್ಯಾರ್ಥಿಗಳು ವಿವಿಧ ಬಣ್ಣ ಹೂವುಗಳಿಂದ ರಾಷ್ಟ್ರ ದ್ವಜ ಚಿತ್ರ ನಿರ್ಮಾಣ ಮಾಡಿದರು. ಬಳಿಕ ಸ್ವಾತಂತ್ರ್ಯ ವೀರರ ಇತಿಹಾಸ ಸ್ಮರಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವಿಜಯ ಕುಮಾರ್, ಮುಖ್ಯ ಶಿಕ್ಷಕಿ ಜ್ಯೋತಿ ಸಹಿತ ಶಿಕ್ಷಕ ವೃಂದ ಹಾಗೂ ಎಸ್ ಡಿ ಎಂ ಸಿ ಸದಸ್ಯರುಗಳು ಭಾಗವಹಿಸಿದ್ದರು.
0 comments:
Post a Comment