ಬಂಟ್ವಾಳ, ಜುಲೈ 02, 2022 (ಕರಾವಳಿ ಟೈಮ್ಸ್) : ತಾಲೂಕಿನ ಕೊಳ್ನಾಡು ಗ್ರಾಮದ ಸಾಲೆತ್ತೂರು ಸಮೀಪದ ಬೊಳಪಾದೆ ರಸ್ತೆ ಬದಿ ಅಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣ ಬೇಧಿಸಿದ ವಿಟ್ಲ ಪೊಲೀಸರು ಗಾಂಜಾ ಮತ್ತಿತರ ಅಮಲು ಪದಾರ್ಥ ಸಹಿತ ಮೂರು ಮಂದಿ ಆರೋಪಿಗಳಾದ ರಹಿಮಾನ್, ಜಲಾಲುದ್ದೀನ್ ಹಾಗೂ ಅಬೂಬಕ್ಕರ್ ಅಲಿಯಾಸ್ ಫೈಝಲ್ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ.
ಶನಿವಾರ ಬೆಳಿಗ್ಗೆ ವಿಟ್ಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಟಿ ಅವರು ಸಿಬ್ಬಂದಿಗಳೊಂದಿಗೆ ಗಸ್ತು ತಿರುಗುತ್ತಿದ್ದ ವೇಳೆ ಸಾಲೆತ್ತೂರು ಸಮೀಪದ ಬೊಳಪಾದೆ ರಸ್ತೆಯ ಬದಿಯಲ್ಲಿ ನೋಂದಣಿ ಸಂಖ್ಯೆ ಕೆಎ 19 ಎಸಿ 1267 ರ ಅಟೋರಿಕ್ಷಾ ನಿಲ್ಲಿಸಿಕೊಂಡು ಅದರ ಬಳಿ ಇದ್ದ ಆರೋಪಿಗಳು ಸಂಶಯಾಸ್ಪದ ರೀತಿಯಲ್ಲಿ ನಿಂತುಕೊಂಡಿದ್ದವರನ್ನು ವಿಚಾರಿಸಲು ಅವರ ಬಳಿಗೆ ಪೊಲೀಸರು ತೆರಳಿದಾಗ ಪರಾರಿಯಾಗಲು ಯತ್ನಿಸಿದವರನ್ನು ತಡೆದು ನಿಲ್ಲಿಸಿ ಅಟೋ ರಿಕ್ಷಾವನ್ನು ಪರಿಶೀಲಿಸಿದಾಗ ಮಾದಕ ವಸ್ತುಗಳಾದ ಗಾಂಜಾ ಮತ್ತಿತರ ಸಾಮಾಗ್ರಿಗಳು ಕಂಡು ಬಂದಿದೆ.
ಆರೋಪಿಗಳಿಂದ ಪೊಲೀಸರು ಸುಮಾರು 1 ಸಾವಿರ ರೂಪಾಯಿ ಮೌಲ್ಯದ 100 ಗ್ರಾಂ ಗಾಂಜಾ, ಸುಮಾರು 6 ಸಾವಿರ ರೂಪಾಯಿ ಮೌಲ್ಯದ ಎಂಡಿಎಂಎ, ಮಾದÀಕ ವಸ್ತು ಮಾರಾಟದಿಂದ ಬಂದ 610/- ರೂಪಾಯಿ ನಗದು, ಸುಮಾರು 10 ಸಾವಿರ ರೂಪಾಯಿ ಮೌಲ್ಯದ 3 ಮೊಬೈಲ್ ಫೆÇೀನುಗಳು, 1 ಲಕ್ಷ ರೂಪಾಯಿ ಮೌಲ್ಯದ ಅಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 111/2022 ಕಲಂ 8(ಸಿ), 20(ಬಿ)(11)(ಎ) ನಾರ್ಕೋಟಿಕ್ ಡ್ರಗ್ಸ್ ಆಂಡ್ ಸೈಕೋಟ್ರಾಟಿಕ್ ಸಬ್‍ಸ್ಟ್ಯಾನ್ಸನ್ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ.
0 comments:
Post a Comment