ಅವೈಜ್ಞಾನಿಕ ಮಣ್ಣು ಅಗೆತ : ಕುಸಿತದ ಭೀತಿಯಲ್ಲಿ ಬಂಟ್ವಾಳ ಪುರಸಭಾ ಬೃಹತ್ ಕುಡಿಯುವ ನೀರಿನ ಟ್ಯಾಂಕ್ - Karavali Times ಅವೈಜ್ಞಾನಿಕ ಮಣ್ಣು ಅಗೆತ : ಕುಸಿತದ ಭೀತಿಯಲ್ಲಿ ಬಂಟ್ವಾಳ ಪುರಸಭಾ ಬೃಹತ್ ಕುಡಿಯುವ ನೀರಿನ ಟ್ಯಾಂಕ್ - Karavali Times

728x90

10 July 2022

ಅವೈಜ್ಞಾನಿಕ ಮಣ್ಣು ಅಗೆತ : ಕುಸಿತದ ಭೀತಿಯಲ್ಲಿ ಬಂಟ್ವಾಳ ಪುರಸಭಾ ಬೃಹತ್ ಕುಡಿಯುವ ನೀರಿನ ಟ್ಯಾಂಕ್


ಬಂಟ್ವಾಳ, ಜುಲೈ 11, 2022 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಸಮೀಪದ ಉಪ್ಪುಗುಡ್ಡೆಯಲ್ಲಿರುವ ಪುರಸಭಾ ಸಮಗ್ರ ಕುಡಿಯುವ ನೀರು ಸರಬರಾಜಿನ ಬೃಹತ್ ಟ್ಯಾಂಕ್ ಇದೀಗ ಪೂರ್ಣ ಕುಸಿತದ ಭೀತಿ ಎದುರಿಸುತ್ತಿದೆ.


ಟ್ಯಾಂಕ್ ಅಡಿಭಾಗದ ಖಾಸಗಿ ಜಮೀನಿನ ಅವೈಜ್ಞಾನಿಕ ಮಣ್ಣು ಅಗೆತವೇ ಈ ಟ್ಯಾಂಕ್ ಕುಸಿತದ ಭೀತಿ ಎದುರಿಸಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಟ್ಯಾಂಕ್ ಅಡಿಭಾಗದ ಖಾಸಗಿ ಜಮೀನಿನ ಮಣ್ಣು ಅಗೆತದ ಆರಂಭಿಕ ಹಂತದಲ್ಲೇ ಸ್ಥಳೀಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಪುರಸಭಾಧಿಕಾರಿಗಳಿಗೆ ದೂರು‌ ನೀಡಿದ್ದರು. ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಸ್ವತಃ ಪರಿಶೀಲನೆ ನಡೆಸಿದ್ದ ಪುರಸಭಾಧಿಕಾರಿಗಳು ವೈಜ್ಞಾನಿಕವಾಗಿ ಮಾತ್ರ ಮಣ್ಣು ಅಗೆತ ನಡೆಸಿ ಟ್ಯಾಂಕ್ ಸುರಕ್ಷತೆಗೆ ಒತ್ತು ನೀಡುವಂತೆ ಜಮೀನು ಮಾಲಕರಿಗೆ ಸೂಚಿಸಿದ್ದರು ಎನ್ನಲಾಗಿದೆ. ಆದರೂ ಮಣ್ಣು ಅಗೆತ ಯಥಾ ಸ್ಥಿತಿ ಮುಂದುವರಿದ ಹಿನ್ನಲೆಯಲ್ಲಿ ಇದೀಗ ಪುರಸಭಾ ಟ್ಯಾಂಕ್ ಕುಸಿತದ ಅಪಾಯ ಎದುರಿಸುತ್ತಿದೆ. 

ಇದೀಗ ಮತ್ತೆ ಎಚ್ಚೆತ್ತುಕೊಂಡಿರುವ ಪುರಸಭಾಡಳಿತ ಹಾಗೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರಾದರೂ ಟ್ಯಾಂಕ್ ಕುಸಿತ ಭೀತಿ ತಪ್ಪಿಸಲು ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬ ಚಿಂತನೆ ನಡೆಸುತ್ತಿದ್ದಾರೆ. 

ರಾಜಕೀಯ ಪ್ರಭಾವಗಳಿಗೆ ಬಲಿಯಾಗಿ ಅಧಿಕಾರಿಗಳು ವಾಸ್ತವಕ್ಕೆ ವಿರುದ್ದವಾಗಿ ವರ್ತಿಸುತ್ತಿರುವ ಕಾರಣಗಳಿಂದ ಇಂತಹ ಅನಾಹುತಕಾರಿ ಸನ್ನಿವೇಶಗಳು ಎದುರಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಅವೈಜ್ಞಾನಿಕ ಮಣ್ಣು ಅಗೆತ : ಕುಸಿತದ ಭೀತಿಯಲ್ಲಿ ಬಂಟ್ವಾಳ ಪುರಸಭಾ ಬೃಹತ್ ಕುಡಿಯುವ ನೀರಿನ ಟ್ಯಾಂಕ್ Rating: 5 Reviewed By: karavali Times
Scroll to Top