ಬೆಂಗಳೂರು, ಜುಲೈ 17, 2022 (ಕರಾವಳಿ ಟೈಮ್ಸ್) : ಕೇವಲ ದಾಖಲೆಗಳ ಪರಿಶೀಲನೆಗಾಗಿ ಮಾತ್ರ ರಸ್ತೆಯಲ್ಲಿ ವಾಹನ ತಡೆದು ನಿಲ್ಲಿಸದಂತೆ ರಾಜ್ಯ ಡಿಜಿ-ಐಜಿಪಿ ಪ್ರವೀಣ್ ಸೂದ್ ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳ ಎಸ್ಪಿಗಳಿಗೆ ಖಡಕ್ ಸೂಚನೆ ನೀಡಿ ಆದೇಶ ಹೊರಡಿಸಿದ್ದಾರೆ. ಇತ್ತೀಚೆಗಷ್ಟೆ ಬೆಂಗಳೂರು ಮಹಾನಗರಕ್ಕೆ ಸಂಬಂಧಿಸಿ ನಗರದ ಪೊಲೀಸ್ ಅಧಿಕಾರಿಗಳಿಗೆ ಅವರು ಈ ಆದೇಶ ನೀಡಿದ್ದರು. ಇದೀಗ ಅದನ್ನು ರಾಜ್ಯಾದ್ಯಂತ ವಿಸ್ತರಿಸಿ ಎರಡನೇ ಬಾರಿಗೆ ಆದೇಶಿಸಿದ್ದಾರೆ.
ಪದೇ ಪದೇ ಪೊಲೀಸರ ವಿರುದ್ದ ಸಾರ್ವಜನಿಕ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಪ್ರವೀಣ್ ಸೂದ್ ಇದೀಗ ಎರಡನೇ ಆದೇಶವನ್ನು ರಾಜ್ಯಾದ್ಯಂತ ಅನ್ವಯವಾಗುವಂತೆ ಹೊರಡಿಸಿದ್ದು, ಕೇವಲ ಡಾಕ್ಯುಮೆಂಟ್ ಪರಿಶೀಲನೆಗೆ ಮಾತ್ರ ರಸ್ತೆಯಲ್ಲಿ ವಾಹನ ನಿಲ್ಲಿಸಬೇಡಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕೇವಲ ಡಾಕ್ಯುಮೆಂಟ್ ಪರಿಶೀಲನೆಗೆ ವಾಹನ ಸವಾರರನ್ನು ರಸ್ತೆಯ ಮಧ್ಯೆ ನಿಲ್ಲಿಸಬೇಡಿ, ಡ್ರಿಂಕ್ ಆಂಡ್ ಡ್ರೈವ್ ಬಗ್ಗೆ ಮಾತ್ರ ಪರಿಶೀಲನೆ ನಡೆಸಿ ಹಾಗೂ ಕಣ್ಣಿಗೆ ಕಾಣುವಂತಹ ಅಪರಾಧ ಕಂಡು ಬಂದರೆ ಮಾತ್ರ ವಾಹನ ನಿಲ್ಲಿಸಿ ಪರಿಶೀಲನೆ ನಡೆಸುವಂತೆ ಡಿಜಿ-ಐಜಿಪಿ ಪ್ರವೀಣ್ ಸೂದ್ ಸೂಚಿಸಿದ್ದಾರೆ. ಪಟ್ಟಣ ಮತ್ತು ಹೆದ್ದಾರಿಗಳಲ್ಲಿ ಎಲ್ಲಾ ಕಡೆ ಈ ಸೂಚನೆ ಅನುಸರಿಸುವಂತೆಯೂ ಸೂದ್ ಪೊಲೀಸರಿಗೆ ಆದೇಶಿಸಿದ್ದಾರೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಈ ಆದೇಶ ಅನ್ವಯವಾಗಲಿದೆ ಎಂದವರು ಆದೇಶದಲ್ಲಿ ತಿಳಿಸಿದ್ದಾರೆ. ಈ ಆದೇಶವನ್ನು ಕೆಳ ಹಂತದವರೆಗೂ ತಲುಪಿಸಿ ಎಂದವರು ಪೆÇಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
0 comments:
Post a Comment