ಬಂಟ್ವಾಳ, ಜುಲೈ 24, 2022 (ಕರಾವಳಿ ಟೈಮ್ಸ್) : ತಾಲೂಕು ಭಾರತರತ್ನ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಸಮಾಜ ಸೇವಾ ಸಂಘ (ರಿ) ಜೋಡುಮಾರ್ಗÀ ಇದರ ಸ್ಥಾಪಕರಾಗಿ, ಸಾಮಾಜಿಕ ಚಿಂತಕರಾಗಿ, ದಲಿತ ನಾಯಕರಾಗಿ ಸೇವಾನಿರತರಾಗಿದ್ದ ದಿವಂಗತ ಭಾನುಚಂದ್ರ ಕೃಷ್ಣಾಪುರ ಅವರು ನಿಧನರಾಗಿ ಪ್ರಥಮ ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಅವರ ಸ್ಮರಣೆಗಾಗಿ ಸಂಘದ ವತಿಯಿಂದ ಶನಿವಾರ ಬಂಟ್ವಾಳ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ಹಂಪಲು ವಿತರಿಸಲಾಯಿತು.
ಈ ಸಂದರ್ಭ ಸಂಘದ ಅಧ್ಯಕ್ಷ ಕೆ ಸತೀಶ್ ಅರಳ, ಕಾರ್ಯಾಧ್ಯಕ್ಷ ರಾಜಾ ಚೆಂಡ್ತಿಮಾರ್, ಉಪಾಧ್ಯಕ್ಷ ಪಿ ಕೇಶವ ನಾಯ್ಕ, ಪ್ರದಾನ ಕಾರ್ಯಾದರ್ಶಿ ವೆಂಕಟೇಶ್ ಕೃಷ್ಣಾಪುರ, ಕೋಶಾಧಿಕಾರಿ ಶ್ರೀನಿವಾಸ್ ಆರ್ಬಿಗುಡ್ಡೆ, ಕ್ರೀಡಾಧ್ಯಕ್ಷ ಚಂದ್ರಹಾಸ್ ಆರ್ಬಿಗುಡ್ಡೆ, ಜೊತೆ ಕಾರ್ಯದರ್ಶಿ ಸಂತೋಷ್ ಭಂಡಾರಿಬೆಟ್ಟು, ಗೌರವ ಸಲೆಹೆಗಾರ ನಾರಾಯಣ ಬಂಗೇರ ಕೃಷ್ಣಾಪುರ, ಚಿದಾನಂದ ಬಡಗಬೆಳ್ಳೂರು ಹಾಗೂ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.
0 comments:
Post a Comment