ಬೆಳ್ಳಾರೆ, ಜುಲೈ 05, 2022 (ಕರಾವಳಿ ಟೈಮ್ಸ್) : ಕಾಳುಮೆಣಸು ಕಳ್ಳತನ ಪ್ರಕರಣ ಬೇಧಿಸಿದ ಬೆಳ್ಳಾರೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಸುಳ್ಯ ತಾಲೂಕು, ಜಾಲ್ಸೂರು ಗ್ರಾಮದ ಕಳಂಜಿ ಮನೆ ನಿವಾಸಿ ಜೋಗಿ ಬಿ ಆರ್ ಅವರ ಪುತ್ರ ಮಂಜು, ಕೊಡಿಯಬೈಲು ನಿವಾಸಿ ಬಾಬು ಅವರ ಪುತ್ರ ಪ್ರವೀಣ, ಜಾಲ್ಸೂರು ಗ್ರಾಮದ ಬರ್ಪೆಡ್ಕ ನಿವಾಸಿ ನಾಗರಾಜ್ ಅವರ ಪುತ್ರ ಪವನ್ ಕುಮಾರ್, ಪುತ್ತೂರು ತಾಲೂಕು, ಕೊಳ್ತಿಗೆ ಗ್ರಾಮದ ನೀಟಡ್ಕ ನಿವಾಸಿ ಕುಂಞÂ ಅವರ ಪುತ್ರ ಬಾಶೀತ್ ಎಂದು ಹೆಸರಿಸಲಾಗಿದೆ.
ಜೂನ್ 15 ರ ಜುಲೈ 3 ರ ಮಧ್ಯೆ ಕೊಳ್ತಿಗೆ ಗ್ರಾಮದ ನೀಟಡ್ಕ ನಿವಾಸಿ ಆದಂ ಕುಂಞÂ (60) ಎಂಬವರು ಕೆಲಸ ಮಾಡುತ್ತಿದ್ದ ಕೊಳ್ತಿಗೆ ಗ್ರಾಮದ ಕುದ್ಕುಳಿ ಎಂಬಲ್ಲಿರುವ ಮಹಮ್ಮದ್ ಶಾಫಿ ಎಂಬವರ ತೋಟದಲ್ಲಿರುವ ಗೋದಾಮುನಿಂದ 10 ಗೋಣಿ ಜೀಲದಲ್ಲಿ ತುಂಬಿಸಿಟ್ಟಿರುವ ಸುಮಾರು 1,18,750/- ರೂಪಾಯಿ ಮೌಲ್ಯದ 250 ಕೆ.ಜಿ ಕಾಳು ಮೆಣಸನ್ನು ಕಳವು ಮಾಡಲಾಗಿತ್ತು. ಈ ಬಗ್ಗೆ ಆದಂ ಕುಂಞÂ ನೀಡಿದ ದೂರಿನಂತೆ ಜುಲೈ 3 ರಂದು ಬೆಳ್ಳಾರೆ ಪೆÇಲೀಸು ಠಾಣೆಯಲ್ಲಿ ಅಪರಾಧ ಕ್ರಮಾಂಕ 53/2022 ಕಲಂ 454, 457, 380 ಐಪಿಸಿಯಂತೆ ಪ್ರರಕಣ ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಶಂಕಿತ ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದು ಜು 4 ರಂದು ಅಡ್ಕಾರ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ನೋಂದಣಿ ಸಂಖ್ಯೆ ಕೆಎಲ್ 60 ಡಿ 7089 ರ ಕಾರಿನಲ್ಲಿ ಬರುತ್ತಿದ್ದ ಆರೋಪಿಗಳನ್ನು ದಸ್ತಗಿರಿ ಮಾಡಿ ನಂತರ ಆರೋಪಿ ಪವನ್ ಕುಮಾರನ ಮನೆಯಲ್ಲಿ ಕಳವು ಮಾಡಿ ಬಚ್ಚಿಟ್ಟಿದ್ದ 10 ಗೋಣಿ ಕಾಳು ಮೆಣಸನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಪ್ರಕಣದಲ್ಲಿ ಇನ್ನೊಬ್ಬ ಅಪ್ರಾಪ್ತ ಬಾಲಕನು ಭಾಗಿಯಾಗಿರುತ್ತಾನೆ ಎಂದು ಮಾಹಿತಿ ನೀಡಿರುವ ಪೊಲೀಸರು ಆರೋಪಿಗಳಾದ ಮಂಜು ಬಿ, ಪ್ರವೀಣ, ಪವನ್ ಕುಮಾರ್, ಅಬ್ದುಲ್ ಬಾಶೀತ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾ ಎಸ್ಪಿ ಸೋನಾವಣೆ ರಿಷಿಕೇಶ್, ಮತ್ತು ಎಡಿಶನಲ್ ಎಸ್ಪಿ ಕುಮಾರಚಂದ್ರ ಹಾಗೂ ಪುತ್ತೂರು ಎಎಸ್ಪಿ ಡಾ ಗಾನಾ ಕುಮಾರಿ ಪಿ ಅವರ ಆದೇಶದಂತೆ ಸುಳ್ಯ ವೃತ್ತ ನಿರೀಕ್ಷಕ ನವೀನ ಚಂದ್ರ ಜೋಗಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳಾದ ಎಎಸ್‍ಐ ನಾರಾಯಣ, ಎಚ್‍ಸಿಗಳಾದ ಬಾಲಕೃಷ್ಣ, ನವೀನ್, ಸತೀಶ, ಪಿಸಿಗಳಾದ ಮಂಜುನಾಥ, ಚಂದ್ರಶೇಖರ, ಪ್ರವೀಣ ಕಮಾರ್, ಶ್ರೀಶೈಲ, ಮಂಜುನಾಥ ಎಚ್ ಜೆ ಹಾಗೂ ವಾಹನ ಚಾಲಕ ಪುರಂದರ, ಜಿಲ್ಲಾ ಗಣಕಯಂತ್ರದ ದಿವಾಕರ ಹಾಗೂ ಸಂಪತ್ ಅವರು ಬಂಧನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
0 comments:
Post a Comment