ಬೆಳ್ಳಾರೆ, ಜುಲೈ 20, 2022 (ಕರಾವಳಿ ಟೈಮ್ಸ್) : ಕ್ಷುಲ್ಲಕ ವಿಚಾರಕ್ಕೆ ಉಂಟಾದ ಜಗಳದ ವಿಚಾರಕ್ಕೆ ಸಂಬಂಧಿಸಿ ರಾಜಿ ಪಂಚಾಯಿತಿಕೆ ನಡೆಸಲು ಕರೆಸಿ ಯುವಕನ ಮೇಲೇ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾಸರಗೋಡು ತಾಲೂಕು ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್ (18) ಎಂಬಾತ ಸುಮಾರು 1 ತಿಂಗಳ ಹಿಂದೆ ಸುಳ್ಯ ತಾಲೂಕು ಕಳಂಜ ಗ್ರಾಮದ ಕಳಂಜದಲ್ಲಿರುವ ಅಜ್ಜ ಅಬ್ಬು ಮುಕ್ರಿ ಅವರ ಮನೆಗೆ ಬಂದವನು ಸ್ಥಳೀಯವಾಗಿ ಕೂಲಿ ಕೆಲಸ ಮಾಡಿಕೊಂಡಿದ್ದ. ಮಂಗಳವಾರ ಸಂಜೆ ಮಸೂದ್ ಹಾಗೂ ಸುಧೀರ್ ಎಂಬಾತನ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದ್ದು ಈ ವೇಳೆ ಮಸೂದ್ ಸುಧೀರ್ ಗೆ ಹಲ್ಲೆ ನಡೆಸಿದ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ರಾಜಿ ಪಂಚಾಯತಿಗೆ ನಡೆಸುವ ಸಲುವಾಗಿ ದೂರುದಾರ ಇಬ್ರಾಹಿಂ ಶಾನಿಫ್ ಎಂಬಾತನೊಂದಿಗೆ ಮಸೂದನನ್ನು ಕರೆ ತರುವಂತೆ ಆರೋಪಿಗಳಾದ ಅಭಿಲಾಶ್, ಸು£ೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್ ಮತ್ತು ಭಾಸ್ಕರ ಎಂಬವರು ತಿಳಿಸಿದ ಹಿನ್ನಲೆಯಲ್ಲಿ ಶಾನಿಫ್ ಅವರು ಮಸೂದ್ ನನ್ನು ರಾತ್ರಿ 11 ಗಂಟೆ ವೇಳೆಗೆ ನಗರಕ್ಕೆ ಕರೆದುಕೊಂಡು ಬಂದಿದ್ದು, ಈ ವೇಳೆ ಆರೋಪಿಗಳು ಒಟ್ಟು ಸೇರಿ ಏಕಾ ಏಕಿ ಮಸೂದನಿಗೆ ಕೈಯಿಂದ ಹಲ್ಲೆ ಮಾಡಲು ಪ್ರಾರಂಭಿಸಿದ್ದು, ಹಲ್ಲೆಯಿಂದ ಮಸೂದ್ ನೆಲಕ್ಕೆ ಬಿದ್ದಿದ್ದು ಬಿದ್ದಲ್ಲಿಗೆ ಅವರೆಲ್ಲರೂ ಕಾಲಿನಿಂದ ತುಳಿದು ಅವರ ಪೈಕಿ ಅಭಿಲಾಶ್ ಎಂಬಾತ ಖಾಲಿ ಜೂಸ್ ಬಾಟಲಿಯಿಂದ ಮಸೂದನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ಮಸೂದ್ ರಾತ್ರಿ 1-30 ಗಂಟೆಗೆ ಸಮೀಪದ ಅಬೂಬಕ್ಕರ್ ಎಂಬವರ ಬಾವಿಯ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ. ಆತನನ್ನು ಅಲ್ಲಿಂದ ಇಬ್ರಾಹಿಂ ಶಾನಿಫ್ ಉಪಚರಿಸಿ ಕಾರಿನಲ್ಲಿ ಸುಳ್ಯ, ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿಗೆ ಸಾಗಿಸುವಂತೆ ಸೂಚಿಸಿದ ಹಿನ್ನಲೆಯಲ್ಲಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 60/2022 ಕಲಂ 143, 147, 323, 324, 307 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಪ್ರಕರಣದ ಬಗ್ಗೆ ತನಿಖೆ ಕೈಗೆತ್ತಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳಾದ ಅಭಿಲಾಷ್, ಸುನೀಲ್, ಸುಧೀರ್, ಶಿವ, ರಂಜಿತ್, ಸದಾಶಿವ, ಜಿಮ್ ರಂಜಿತ್ ಹಾಗೂ ಭಾಸ್ಕರ ಎಂಬವರನ್ನು ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
0 comments:
Post a Comment