ಬಂಟ್ವಾಳ, ಜುಲೈ 16, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಬಂಗ್ಲೆಗುಡ್ಡೆ ನಿವಾಸಿ, ಅವಿವಾಹಿತ ಯುವಕ ಪಿ.ಬಿ. ಇಂತಿಯಾಝ್ (40) ಅವರು ಅಲ್ಪ ಕಾಲದ ಅಸೌಖ್ಯದಿಂದ ಶುಕ್ರವಾರ ರಾತ್ರಿ 8 ಗಂಟೆ ವೇಳೆ ಸ್ವಗೃಹದಲ್ಲಿ ನಿಧನರಾದರು.
ದೈಹಿಕವಾಗಿ ಅಂಗ ವೈಕಲ್ಯ ಹೊಂದಿದ್ದ ಇವರು ಮನೆಯಲ್ಲೇ ಇದ್ದರು. ಇತ್ತೀಚೆಗಷ್ಡೆ (ಜೂನ್ 2) ಇವರ ತಂದೆ ಕಾಂಗ್ರೆಸ್ ಮುಖಂಡ ಪಿ ಬಿ ಅಹ್ಮದ್ ಹಾಜಿ ಅವರು ನಿಧನರಾಗಿದ್ದರು. ತಂದೆಯ ನಿಧನದ ಬಳಿಕ ತೀವ್ರ ಖಿನ್ನತೆಗೊಳಗಾಗಿದ್ದ ಇಂತಿಯಾಝ್ ವಾರದ ಹಿಂದೆ ಅನಾರೋಗ್ಯಕ್ಕೊಳಗಾಗಿದ್ದರು. ಚಿಕಿತ್ಸೆ ನೀಡಲಾಗುತ್ತಿದ್ದರೂ ಸ್ಪಂದಿಸದೆ ಶುಕ್ರವಾರ ರಾತ್ರಿ ನಿಧನರಾದರು. ಮೃತರ ದಫನ ಕಾರ್ಯವು ಶನಿವಾರ (ಜುಲೈ 16) ಬೆಳಿಗ್ಗೆ 8 ಗಂಟೆ ವೇಳೆಗೆ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ದಫನ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮೃತರು ತಾಯಿ, ಏಳು ಮಂದಿ ಸಹೋದರರು, ಆರು ಮಂದಿ ಸಹೋದರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
0 comments:
Post a Comment