ಗುಡ್ಡೆಅಂಗಡಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ - Karavali Times ಗುಡ್ಡೆಅಂಗಡಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ - Karavali Times

728x90

9 July 2022

ಗುಡ್ಡೆಅಂಗಡಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ

  ಬಂಟ್ವಾಳ, ಜುಲೈ 10, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿಯಲ್ಲಿ ಬಕ್ರೀದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. 

 ನೂರುದ್ದೀನ್ ಜುಮಾ ಮಸೀದಿಯಲ್ಲಿ ಬಕ್ರೀದ್ ಪ್ರಯುಕ್ತ ನಡೆದ ಈದ್ ನಮಾಝ್ ಹಾಗೂ ವಿಶೇಷ ಖುತುಬಾಕ್ಕೆ ಮಸೀದಿ ಖತೀಬ್ ಹಸ್ವೀಫ್ ದಾರಿಮಿ ನೇತೃತ್ವ ನೀಡಿದರು. 

 ಈ ಸಂದರ್ಭ ಪುರಸಭಾ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್, ಮಸೀದಿ ಗೌರವಾಧ್ಯಕ್ಷ ಹಾಜಿ ಮುಹಮ್ಮದ್ ನೀಮಾ, ಅಧ್ಯಕ್ಷ ಎಸ್ ಮುಹಮ್ಮದ್ ಸಜಿಪ, ಕಾರ್ಯದರ್ಶಿ ಅಬೂಬಕ್ಕರ್ ಮೆಲ್ಕಾರ್, ಪ್ರಮುಖರಾದ ಇರ್ಶಾದ್ ಗುಡ್ಡೆಅಂಗಡಿ, ಫಾರೂಕ್, ಮಜೀದ್ ಬೋಗೋಡಿ ಮೊದಲಾದವರು ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಗುಡ್ಡೆಅಂಗಡಿಯಲ್ಲಿ ಸಂಭ್ರಮದ ಬಕ್ರೀದ್ ಆಚರಣೆ Rating: 5 Reviewed By: karavali Times
Scroll to Top