ಬಂಟ್ವಾಳ, ಜುಲೈ 29, 2022 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ಘಟಕದ ವತಿಯಿಂದ ತಿಂಗಳ ಬೆಳಕು ಮಾಸಿಕ ಕಾರ್ಯಕ್ರಮದಲ್ಲಿ ಬಹುಭಾಷಾ ಕವಿಗೋಷ್ಠಿಯು ಜುಲೈ 31 ರಂದು ಭಾನುವಾರ ಅಪರಾಹ್ನ 2.30ಕ್ಕೆ ಬಿ ಸಿ ರೋಡಿನ ಕನ್ನಡ ಭವನದಲ್ಲಿ ನಡೆಯಲಿದೆ.
ಹಿರಿಯ ಕವಿ ಗಣೇಶ ಪ್ರಸಾದ ಪಾಂಡೇಲು ಸಂಯೋಜಿಸುವ ಈ ಗೋಷ್ಠಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ ಎಂ ಪಿ ಶ್ರೀನಾಥ್ ಉದ್ಘಾಟಿಸುವರು. ಕವಿ ಹಾಗೂ ಕನ್ನಡ ಉಪನ್ಯಾಸಕ ಎಂ ಡಿ ಮಂಚಿ ಅಧ್ಯಕ್ಷತೆ ವಹಿಸುವರು.
ಬಹು ಭಾಷಾ ಕವಿಗೋಷ್ಠಿಯಲ್ಲಿ ವಿಶ್ವನಾಥ ಕುಲಾಲ್ ಮಿತ್ತೂರು (ಕನ್ನಡ), ಶಶಿಕಲಾ ಭಾಸ್ಕರ್ ದೈಲಾ (ತುಳು), ಜಯಶ್ರೀ ಶೆಣೈ (ಕೊಂಕಣಿ), ಅಬ್ದುಲ್ ಮಜೀದ್ ಎಸ್ (ಬ್ಯಾರಿ), ಮೈತ್ರಿ ಭಟ್ ವಿಟ್ಲ (ಹವ್ಯಕ), ದಾ ನ ಉಮಣ (ತುಳು), ವಿಷ್ಣುಗುಪ್ತ ಪುಣಚ (ಕನ್ನಡ), ಸುಹಾನ ಸಯ್ಯದ್ ಎಂ (ಬ್ಯಾರಿ), ಸುರೇಶ ಬಾಳಿಗಾ (ಕೊಂಕಣಿ), ಮಾನಸ ವಿಜಯ್ ಕೈಂತಜೆ (ಹವ್ಯಕ), ಆನಂದ ರೈ ಅಡ್ಕಸ್ಥಳ (ತುಳು), ಮುಹಮ್ಮದ್ ಮುಆದ್ ಜಿ ಎಂ (ಬ್ಯಾರಿ), ಶಾಂತಾ ವಿಘ್ನೇಶ್ವರ ಕೋಡ್ಲ (ಹವ್ಯಕ), ನಳಿನಿ ಬಿ ರೈ ಮಂಚಿ (ಕನ್ನಡ), ಜಯಶ್ರೀ ಇಡ್ಕಿದು (ಕನ್ನಡ) ಅವರು ಭಾಗವಹಿಸಲಿದ್ದಾರೆ ಎಂದು ಬಂಟ್ವಾಳ ಕಸಾಪ ಅಧ್ಯಕ್ಷ ವಿಶ್ವನಾಥ ಬಂಟ್ವಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 comments:
Post a Comment