ಬಂಟ್ವಾಳ, ಜುಲೈ 17, 2022 (ಕರಾವಳಿ ಟೈಮ್ಸ್) : ಮಂಗಳೂರಿನ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ಅವರ ನೇತೃತ್ವದಲ್ಲಿ ಬಿ ಸಿ ರೋಡು ಸಮೀಪದ ಅಜ್ಜಿಬೆಟ್ಟು ಬಿ ಮೂಡ ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣಗಳನ್ನು ಹಸ್ತಾಂತರಿಸಲಾಯಿತು.
ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಒಟ್ಟು 13 ನಲಿ ಕಲಿ ಟೇಬಲುಗಳುಗಳನ್ನು ಈಗಾಗಲೇ ಹಸ್ತಾಂತರಿಸಲಾಗಿದ್ದು, ಮುಂದಕ್ಕೆ ಅವುಗಳಿಗೆ ಪೂರಕವಾಗುವಂತೆ ಕುರ್ಚಿಗಳನ್ನು ಒದಗಿಸುವ ಭರವಸೆಯನ್ನು ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕರ್ ನೀಡಿದರು.
ಈ ಸಂದರ್ಭ ಬಂಟ್ವಾಳ ಸ್ವರ್ಣೋದ್ಯಮಿ ಬಿ ನಾಗೇಂದ್ರ ಬಾಳಿಗಾ, ಟ್ರಸ್ಟ್ ಕೋಶಾಧಿಕಾರಿ ಭಾಗ್ಯಶ್ರೀ ಭಂಡಾರ್ಕರ್, ಸದಸ್ಯ ಗಿರೀಶ್ ಪೈ, ಶಿಕ್ಷಣ ಇಲಾಖೆಯ ಸಿ ಆರ್ ಪಿ ಉಷಾ ಸುವರ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ ಮಾಂಬಾಡಿ, ಉಪಾಧ್ಯಕ್ಷೆ ಮಮತಾ, ಶಾಲಾ ಮುಖ್ಯ ಶಿಕ್ಷಕಿ ಕುಶಲ ಎ, ಶಿಕ್ಷಕರಾದ ನವೀನ್ ಪಿ ಎಸ್, ಹೇಮಾವತಿ, ಸುಶೀಲಾ ಹಾಗೂ ಎಸ್ ಡಿ ಎಂ ಸಿ ಸದಸ್ಯರು ಭಾಗವಹಿಸಿದ್ದರು.
0 comments:
Post a Comment