ಬಂಟ್ವಾಳ, ಜೂನ್ 23, 2022 (ಕರಾವಳಿ ಟೈಮ್ಸ್) : ತಾಲೂಕಿನ ಕಲ್ಲಡ್ಕ ಸಮೀಪದ ಹನುಮಾನ್ ನಗರ ನಿವಾಸಿ ರವಿ ಆಚಾರ್ಯ ಅವರ ಪುತ್ರಿ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಆರಾಧ್ಯ ಆಚಾರ್ಯ (6) ಜ್ವರ ಉಲ್ಭಣಗೊಂಡು ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾಳೆ.
ಬಾಲಕಿ ಕಳೆದೊಂದು ವಾರದಿಂದ ಜ್ವರದಿಂದ ಬಳಲುತ್ತಿದ್ದು, ಸ್ಥಳೀಯ ವೈದ್ಯರಿಂದ ಔಷಧಿ ಪಡೆಯಲಾಗಿತ್ತು. ಆದರೆ ಎರಡು ದಿನಗಳಿಂದ ಜ್ವರ ಮತ್ತಷ್ಟು ವಿಪರೀತಗೊಂಡು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಮೃತ ಪುಟಾಣಿಯ ಶೋಕಾರ್ಥವಾಗಿ ಗುರುವಾರ ಶಾಲೆಗೆ ರಜೆ ಘೋಷಿಸಿ ಸಂತಾಪ ವ್ಯಕ್ತಪಡಿಸಲಾಗಿದೆ.
0 comments:
Post a Comment