ಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಅಂತಿಮ ಅವಕಾಶ : ಜೂನ್ 11 ರಿಂದ 13 ರವರೆಗೆ ಆನ್ ಲೈನ್ ನೋಂದಣಿಗೆ ಅವಕಾಶ - Karavali Times ಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಅಂತಿಮ ಅವಕಾಶ : ಜೂನ್ 11 ರಿಂದ 13 ರವರೆಗೆ ಆನ್ ಲೈನ್ ನೋಂದಣಿಗೆ ಅವಕಾಶ - Karavali Times

728x90

9 June 2022

ಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಅಂತಿಮ ಅವಕಾಶ : ಜೂನ್ 11 ರಿಂದ 13 ರವರೆಗೆ ಆನ್ ಲೈನ್ ನೋಂದಣಿಗೆ ಅವಕಾಶ

ಬೆಂಗಳೂರು, ಜೂನ್ 09, 2022 (ಕರಾವಳಿ ಟೈಮ್ಸ್) : ಅಭ್ಯರ್ಥಿಗಳ ಹಿತದೃಷ್ಟಿ ಪರಿಗಣಿಸಿ ಈಗಾಗಲೇ ಸುಮಾರು 7 ಬಾರಿ ಯುಜಿಸಿಇಟಿ-2022ರ ಪ್ರವೇಶಾತಿಗೆ ಆನ್ ಲೈನ್ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಆದರೂ ಕೆಲವು ಅಭ್ಯರ್ಥಿಗಳು ಪೂರ್ಣವಾಗಿ ಅರ್ಜಿ ಸಲ್ಲಿಸಿರುವುದಿಲ್ಲ. ಕೆಲವರು ಫೋಟೋ ಅಪ್ಲೋಡ್ ಮಾಡಿರುವುದಿಲ್ಲ. ಅಥವಾ ಪ್ರಾಯೋಗಿಕವಾಗಿ ಅರ್ಜಿ ಸಲ್ಲಿಸಿದ ನಂತರ ಅಧಿಕೃತವಾಗಿ ಅರ್ಜಿ ಸಲ್ಲಿಸಿರುವುದಿಲ್ಲ. ಈ ಕಾರಣಕ್ಕಾಗಿ ಅಭ್ಯರ್ಥಿಗಳ ಹಿತದೃಷ್ಟಿಗಾಗಿ ಮತ್ತೊಮ್ಮೆ ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಿ ಬಾಕಿ ಇರುವ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ಜೂನ್ 11 ರ ಸಂಜೆ 4 ರಿಂದ ಜೂನ್ 13 ರ ಸಂಜೆ 4 ಗಂಟೆವರೆಗೆ ಆನ್ ಲೈನ್ ಅರ್ಜಿ ಸಲ್ಲಿಸಲು ಪೋರ್ಟಲ್ ತೆರೆಯಲಾಗುವುದು. 

ಸಿಇಟಿ ಅಭ್ಯರ್ಥಿಗಳು ಅಂತಿಮ ಅವಕಾಶವನ್ನು ಬಳಸಿಕೊಂಡು ಇಷ್ಟ ಇದ್ದಲ್ಲಿ ಸದುಪಯೋಗಪಡಿಸಿಕೊಳ್ಳಬಹುದು. ಸಿಇಟಿ-2022 ರ ಪರೀಕ್ಷೆಗೆ ಕೇಂದ್ರ ನಿಗದಿಪಡಿಸುವುದು ಪ್ರಾಧಿಕಾರದ ವಿವೇಚನೆಗೆ ಒಳಪಟ್ಟಿರುತ್ತದೆ. ಕರ್ನಾಟಕ ರಾಜ್ಯದ ಯಾವುದೇ ಕೇಂದ್ರಗಳು ದೊರೆಯಬಹುದು. 

  • Blogger Comments
  • Facebook Comments

0 comments:

Post a Comment

Item Reviewed: ಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಅಂತಿಮ ಅವಕಾಶ : ಜೂನ್ 11 ರಿಂದ 13 ರವರೆಗೆ ಆನ್ ಲೈನ್ ನೋಂದಣಿಗೆ ಅವಕಾಶ Rating: 5 Reviewed By: karavali Times
Scroll to Top