ಬಂಟ್ವಾಳ, ಜೂನ್ 02, 2022 (ಕರಾವಳಿ ಟೈಮ್ಸ್) : ತಾಲೂಕಿನ ಬೋಳಂತೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ನೂತನವಾಗಿ ನಿರ್ಮಿಸಲಾದ ಎಲ್ ಕೆ ಜಿ ಹಾಗೂ ಯು ಕೆ ಜಿ ಕೊಠಡಿಗಳ ಉದ್ಘಾಟನೆ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮ ಬುಧವಾರ (ಜೂನ್ 1) ನಡೆಯಿತು.
ಬೋಳಂತೂರು ಗ್ರಾ ಪಂ ಮಾಜಿ ಉಪಾಧ್ಯಕ್ಷ ಹಾಗೂ ಶಾಲಾ ಹಿರಿಯ ವಿದ್ಯಾರ್ಥಿ ಚಂದ್ರಶೇಖರ ರೈ ನಾರ್ಶ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅನಂತ ಪದ್ಮನಾಭ ಬಳ್ಳಕುರಾಯ ಹಾಗೂ ಇಸ್ಮಾಯಿಲ್ ಅವರು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಅಹಮ್ಮದ್ ಬಶೀರ್ ಶಾಲಿಮಾರ್, ಬಂಟ್ವಾಳ ತಾ ಪಂ ಮಾಜಿ ಉಪಾಧ್ಯಕ್ಷ ಹಾಗೂ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಿ ಎಂ ಅಬ್ಬಾಸ್ ಅಲಿ, ಹಿರಿಯ ವಿದ್ಯಾರ್ಥಿ ಜಯರಾಂ ರೈ ಗುಡ್ಡೆಮಾರ್, ಗ್ರಾ ಪಂ ಉಪಾಧ್ಯಕ್ಷೆ ಮಹಾಲಕ್ಷ್ಮಿ, ಸದಸ್ಯರುಗಳಾದ ಯಾಕೂಬ್ ಡಿ, ಅಶ್ರಫ್ ಪಿ ಸುರಿಬೈಲು, ಅನಿತಾ, ಉದ್ಯಮಿಗಳಾದ ಸುರೇಂದ್ರ ಅಮೀನ್, ರಫೀಕ್ ಪವಿತ್ರ ಬೀಡಿ, ಸಲೀಂ ಕುಡುಂಬಕೋಡಿ, ಮುಹಮ್ಮದ್ ಎನ್ ನಾರಂಕೋಡಿ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಪುಷ್ಪಾ ಎಂ, ಉಸ್ಮಾನ್ ಬಂಗಾರುಕೋಡಿ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಬಶೀರ್ ಎನ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ತಮೀಂ ಎಂ, ಪ್ರಧಾನ ಕಾರ್ಯದರ್ಶಿ ಅಮೀರ್ ಎಂ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಕೇಶವಯ್ಯ ಎಸ್, ಸುಕೇಶಿನಿ, ಇಸ್ಮಾಯಿಲ್, ಸಂದೇಶ್ ಎಚ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ಶಾಲಾ ದೈಹಿಕ ಶಿಕ್ಷಕ ಹರೀಶ್ ವಿ ಸ್ವಾಗತಿಸಿ, ಮುಖ್ಯ ಶಿಕ್ಷಕಿ ಗೀತಾ ಎನ್ ಪ್ರಸ್ತಾವನೆಗೈದರು. ಶಿಕ್ಷಕಿ ಉಷಾ ವಂದಿಸಿದರು.
0 comments:
Post a Comment