ಬಂಟ್ವಾಳ, ಜೂನ್ 07, 2022 (ಕರಾವಳಿ ಟೈಮ್ಸ್) : ಪರಿಸರದ ಬಗ್ಗೆ, ಗಿಡಮರಗಳ ಬಗ್ಗೆ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಅತೀವ ಪ್ರೀತಿ ಮತ್ತು ಕಾಳಜಿ ಇದ್ದು ಅವರಲ್ಲಿ ಒಂದು ಬಾರಿ ಜಾಗೃತಿ ಮೂಡಿಸಿದರೆ ಜೀವನದುದ್ದಕ್ಕೂ ಪಾಲಿಸುವ ಬದ್ದತೆಯಿದೆ ಎಂದು ಹಿದಾಯ ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ಆಶಾಲತಾ ಅಭಿಪ್ರಾಯಪಟ್ಟರು.
ಹಿದಾಯ ಫೌಂಡೇಶನ್ ಮಂಗಳೂರು ಇದರ ಆಡಳಿತಕ್ಕೆ ಒಳಪಟ್ಟ ಕಾವಳಕಟ್ಟೆಯ ಹಿದಾಯ ವಿಶೇಷ ಮಕ್ಕಳ ವಸತಿಯುತ ಶಾಲೆಯ ಆವರಣದಲ್ಲಿ ಆಚರಿಸಿದ ವಿಶ್ವ ಪರಿಸರದ ದಿನಾಚರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಚೇತನ ಮಕ್ಕಳು ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು, ಪರಿಸರ ಕಾಳಜಿಯ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿ ಸಂಭ್ರಮಾಚರಿಸಿದರು. ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪರಿಸರ ಕುರಿತ ರಸ ಪ್ರಶ್ನೆಯನ್ನು ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿಯರಾದ ಶಾಕಿರಾ, ಆಫಿಯಾ, ನಾಸಿರಾ ಬಾನು, ಆಮಿಷತ್ ನಾಫಿಲಾ ಹಾಗೂ ಸಿಬ್ಬಂದಿಗಳಾದ ಝಹೀರ್ ಹಾಗೂ ಝೊಹರಾ ಉಪಸ್ಥಿತರಿದ್ದರು.
0 comments:
Post a Comment