ಉಪ್ಪಿನಂಗಡಿ, ಜೂನ್ 02, 2022 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಉಂಟಾದ ಹಿಜಾಬ್ ವಿವಾದದ ಹಿನ್ನಲೆಯಲ್ಲಿ ವರದಿಗೆ ತೆರಳಿದ್ದ ನ್ಯೂಸ್18 ಕನ್ನಡ ಟಿವಿ ವರದಿಗಾರ, ಮಂಗಳೂರು ತಾಲೂಕು ಕೋಟೆಕಾರು ಸಮೀಪದ ಮಾಡೂರು ನಿವಾಸಿ ಅಜಿತ್ ಕುಮಾರ್ ಕೆ (44) ಅವರಿಗೆ ವಿದ್ಯಾರ್ಥಿಗಳ ಗುಂಪು ಸುತ್ತುವರಿದು ತಳ್ಳಾಟ ನಡೆಸಿದ್ದಲ್ಲದೆ ದಿಗ್ಬಂಧನ ವಿಧಿಸಿದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುರುವಾರ ಪೂರ್ವಾಹ್ನ ಸುಮಾರು 11.40 ರ ವೇಳೆಗೆ ಅಜಿತ್ ಕುಮಾರ್ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆಯ ಕಾಲೇಜಿನಲ್ಲಿ ಹಿಜಾಬ್ ಹಿನ್ನಲೆಯಲ್ಲಿ ಸಂಘರ್ಷ ಉಂಟಾದ ಬಗ್ಗೆ ಮಾಹಿತಿ ಬಂದ ಮೇರೆಗೆ ಪ್ರಾಂಶುಪಾಲರನ್ನು ಬೇಟಿಯಾಗಿ ಮಾಹಿತಿ ಪಡೆದುಕೊಂಡು ಹಿಂತಿರುಗುವ ಸಂದರ್ಭ ಸುಮಾರು 25 ಮಂದಿ ವಿದ್ಯಾರ್ಥಿಗಳ ಗುಂಪು ಅವರನ್ನು ಸುತ್ತುವರಿದು ತಲ್ಲಾಟ ನಡೆಸಿ ಹಲ್ಲೆ ನಡೆಸುತ್ತಾ ಕಾಲೇಜಿನ ಕ್ಯಾಂಪಸ್ಸಿನಲ್ಲಿ ದಿಗ್ಬಂಧನ ವಿಧಿಸಿದ್ದಲ್ಲದೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಅಜಿತ್ ನೀಡಿದ ದೂರಿನಂತೆ ಉಪ್ಪಿನಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 68/2022 ಕಲಂ 143, 323, 342, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment