ಉಡುಪಿ, ಜೂನ್ 18, 2022 (ಕರಾವಳಿ ಟೈಮ್ಸ್) : ತಾಯಿಯ ಅನಾರೋಗ್ಯ ಹಾಗೂ ತೀವ್ರ ಆರ್ಥಿಕ ಸಂಕಷ್ಟ ಈ ಜಂಜಾಟಗಳ ಮಧ್ಯೆ ಧೃತಿಗೆಡದ ಉಡುಪಿಯ ಎಂಜಿಎಂ ಕಾಲೇಜು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ಶೆಣೈ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಎಲ್ಲರ ಶ್ಲಾಘನೆಗೆ ಪಾತ್ರನಾಗಿದ್ದಾನೆ.
ಕಾರ್ತಿಕ್ ಶೆಣೈ ಶನಿವಾರ್ ಪ್ರಕಟಗೊಂಡ ಪಿಯುಸಿ ಫಲಿತಾಂಶದಲ್ಲಿ 584 ಅಂಕಗಳನ್ನು ಗಳಿಸಿ ಶೇ 97.33 ಫಲಿತಾಂಶ ದಾಖಲಿಸಿದ್ದಾನೆ. ಕಾರ್ತಿಕ್ ಶೆಣೈ ಅವರ ತಾಯಿ ಕಳೆದ ಒಂದೂವರೆ ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವ್ಯಯಿಸಲಾಗಿದೆ. ತಾಯಿಯ ಗಂಭೀರ ಅನಾರೋಗ್ಯದ ಮಾನಸಿಕ ಯಾತನೆ ಒಂದೆಡೆ, ಆರ್ಥಿಕ ಸಂಕಷ್ಟ ಇನ್ನೊಂದೆಡೆ ಈ ಜೀವನ ಜಂಜಾಟದ ಮಧ್ಯೆಯೂ ಕಾರ್ತಿಕ್ ಪಿಯುಸಿಯಲ್ಲಿ ವಿಶಿಷ್ಷ ಸಾಧನೆಗೈದಿದ್ದಾನೆ. ಈತ ಸಂಖ್ಯಾಶಾಸ್ತ್ರ ಹಾಗೂ ಗಣಿತ ವಿಷಯದಲ್ಲಿ 100 ಅಂಕಗಳನ್ನು ಸಂಪಾದಿಸಿ ಪೂರ್ಣ ಅಂಕಗಳನ್ನು ಪಡೆದಿದ್ದಾನೆ. ಇವರು ಉಡುಪಿ ಮೂಡು ಅಲೆವೂರಿನ ಕೃಷ್ಣಾನಂದ ಶೆಣೈ ಹಾಗೂ ಕಾವ್ಯ ಕೆ ಶೆಣೈ ಅವರ ಪುತ್ರ.
0 comments:
Post a Comment