ಬಂಟ್ವಾಳ, ಜೂನ್ 02, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಹಳೆ ನೇತ್ರಾವತಿ ಸೇತುವೆಯಿಂದ ನದಿ ನೀರಿಗೆ ಹಾರಿದ ವೃದ್ದರೋರ್ವರು ಜೀವ ಕಳೆದುಕೊಂಡಿದ್ದಾರೆ. ಮೃತ ವ್ಯಕ್ತಿಯನ್ನು ನರಿಕೊಂಬು ಗ್ರಾಮದ ನಾಟಿ ನಿವಾಸಿ ಮೋನಪ್ಪ ಎಂದು ಗುರುತಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸುಮಾರು 65 ವರ್ಷ ಅಂದಾಜು ಪ್ರಾಯದ ಇವರು ಗುರುವಾರ (ಜೂನ್ 2) ಬೆಳಿಗ್ಗೆ ಗೂಡಿನಬಳಿ ಹಳೆ ನೇತ್ರಾವತಿ ಸೇತುವೆ ಮೇಲಿಂದ ನದಿಗೆ ಹಾರಿದ್ದು, ಇದನ್ನು ಗಮನಿಸಿದ ಸ್ಥಳೀಯ ಈಜುಪಟು ಯುವಕರಾದ ಸಿದ್ದೀಕ್ ಎಂ ಕೆ, ತಂಶೀರ್, ಸತ್ಯ, ಇಜ್ಜು ರಿಝ್ವಾನ್, ಅಮೀನ್, ಇನಾಯತ್, ಇಸ್ಮಾಯಿಲ್ ಅರಬಿ ಅವರು ವೃದ್ದನ ಜೀವ ಉಳಿಸಲು ಶತ ಪ್ರಯತ್ನ ನಡೆಸಿದರಾದರೂ ಸಾಧ್ಯವಾಗದೆ ಅದಾಗಲೇ ಅವರು ಕೊನೆಯುಸಿರೆಳೆದಿದ್ದಾರೆ.
ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಮೃತದೇಹವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.
0 comments:
Post a Comment