ಬಂಟ್ವಾಳ, ಜೂನ್ 09, 2022 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಮೂಡ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಬುಧವಾರ ಶಾಲಾ ಸಭಾಂಗಣದಲ್ಲಿ ನಡೆಯಿತು.
ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಪೆರ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್‍ಡಿಎಂಸಿ ಸದಸ್ಯರಾದ ಸೀತರಾಮ ಅಗೋಳಿಬೆಟ್ಟು, ದಿನಕರ, ಶ್ರೀನಾಥ್ ಶೆಟ್ಟಿ, ರವಿ ಪಂಬದ, ನಳಿನಾಕ್ಷಿ, ಹಿರಿಯ ವಿದ್ಯಾರ್ಥಿ ಸಂದೀಪ್ ಸಾಲ್ಯಾನ್ ಭಾಗವಹಿಸಿದ್ದರು.
614 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನಿಯಾದ ತನುಶ್ರೀ, ಮೊಹಮ್ಮದ್ ಶಾಹಿಲ್, ಅನುಷಾ, ಅಶ್ಫಿಯಾ, ಖತೀಜತುಲ್ ನಾಝೀಯಾ, ಆಯಿಷತ್ ರಾಝೀನಾ, ಆಶಿಕಾ, ಆಯಿಷತ್ ರಿಶಾನಾ ಅವರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು.
ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲೆ ಜಯಲಕ್ಷ್ಮಿ ಪಿ ಎನ್ ಪ್ರಸ್ತಾವನೆಗೈದರು. ಸಹಶಿಕ್ಷಕರಾದ ವೆಂಕಟ್ರಮಣ ಆಚಾರ್ಯ ಹಾಗೂ ಬಾಲಕೃಷ್ಣ ಶೆಟ್ಟಿ ಶುಭ ಹಾರೈಸಿದರು. ಆಲಿಸ್ ಪಾೈಸ್ ಸ್ವಾಗತಿಸಿ, ಗಣೇಶ್ ಬಿ ವಂದಿಸಿದರು. ಸುಲೋಚನಾ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment