ಬಂಟ್ವಾಳ, ಜೂನ್ 16, 2022 (ಕರಾವಳಿ ಟೈಮ್ಸ್) : ಮಾದಕ ಅಮಲು ಪದಾರ್ಥ ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ಹಿನ್ನಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬಂಟ್ವಾಳ ನಗರ ಠಾಣಾ ವ್ಯಾಪ್ತಿಯ ಸಜಿಪ ಜಂಕ್ಷನ್ ಬಳಿ ಬುಧವಾರ ನಡೆದಿದೆ.
ಬಂಟ್ವಾಳ ತಾಲೂಕು, ಸಜಿಪನಡು ಗ್ರಾಮದ ಕುಂಟಾಲಗುಡ್ಡೆ ನಿವಾಸಿ ದಿವಂಗತ ಮೊಹಮ್ಮದ್ ಗೌಸ್ ಅವರ ಪುತ್ರ ಮೊಹಮ್ಮದ್ ಜಾಫರ್ (34) ಎಂಬಾತನೇ ಅಮಲು ಪದಾರ್ಥ ಸೇವಿಸಿ ಪೊಲೀಸರ ವಶವಾದ ಆಸಾಮಿ.
ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಹರೀಶ್ ಎಂ ಆರ್ ನೇತೃತ್ವದ ಪೆÇಲೀಸರು ಬುಧವಾರ ಬೆಳಿಗ್ಗೆ ಗಸ್ತಿನಲ್ಲಿದ್ದ ವೇಳೆ ಸಜೀಪ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬಾತ ಯಾವುದೋ ಮಾದÀಕ ವಸ್ತು ಸೇವಿಸಿ ನಶೆ ಹೊಂದಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂಬುವುದಾಗಿ ದೊರೆತ ಮಾಹಿತಿ ಮೇರೆಗೆ ಸ್ಥಳಕ್ಕೆ ತಲುಪಿ ಆರೋಪಿತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಿಸಿದ ವೇಳೆ ಆತ ಮಾದಕ ವಸ್ತು ಸೇವಿಸಿದ ಬಗ್ಗೆ ಒಪ್ಪಿಕೊಂಡ ಹಿನ್ನಲೆಯಲ್ಲಿ ಆತನನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 42/2022 ಕಲಂ 27(ಬಿ) ಎನ್ ಡಿ ಪಿ ಎಸ್ ಕಾಯಿದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment