ಬಿ.ಸಿ.ರೋಡು : ಅಕ್ರಮ ಜೂಜಾಟ ಕೇಂದ್ರಕ್ಕೆ ಪೊಲೀಸ್ ದಾಳಿ, ನಗದು, ಸೊತ್ತು ಸಹಿತ 28 ಮಂದಿ ವಶಕ್ಕೆ - Karavali Times ಬಿ.ಸಿ.ರೋಡು : ಅಕ್ರಮ ಜೂಜಾಟ ಕೇಂದ್ರಕ್ಕೆ ಪೊಲೀಸ್ ದಾಳಿ, ನಗದು, ಸೊತ್ತು ಸಹಿತ 28 ಮಂದಿ ವಶಕ್ಕೆ - Karavali Times

728x90

2 June 2022

ಬಿ.ಸಿ.ರೋಡು : ಅಕ್ರಮ ಜೂಜಾಟ ಕೇಂದ್ರಕ್ಕೆ ಪೊಲೀಸ್ ದಾಳಿ, ನಗದು, ಸೊತ್ತು ಸಹಿತ 28 ಮಂದಿ ವಶಕ್ಕೆ

ಬಂಟ್ವಾಳ, ಜೂನ್ 02, 2022 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಪೊಲೀಸ್ ಠಾಣಾ ಕೂಗಳತೆಯ ದೂರದಲ್ಲಿ ಬಿ ಸಿ ರೋಡು ಹೃದಯ ಪಟ್ಟಣದ ಮಧ್ಯಭಾಗದಲ್ಲಿ ಕಾರ್ಯಾಚರಿಸುತ್ತಿದ್ದ ರಿಕ್ರಿಯೇಷನ್ ಕ್ಲಬ್ಬಿನಲ್ಲಿ ನಡೆಯುತ್ತಿದ್ದ ಅಕ್ರಮ ಜೂಜಾಟಕ್ಕೆ ಗುರುವಾರ ಅಪರಾಹ್ನ ದಾಳಿ ನಡೆಸಿದ ಬಂಟ್ವಾಳ ಎಎಸ್ಪಿ ಹಾಗೂ ನಗರ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ವಿವೇಕಾನಂದ ನೇತೃತ್ವದ ಪೊಲೀಸರು ಹಲವು ಮಂದಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ನಗದು ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಬಿ ಸಿ ರೋಡು ಮುಖ್ಯ ಪೇಟೆಯ ಶ್ರೀನಿವಾಸ್ ರಾವ್ ಕಾಂಪ್ಲೆಕ್ಸಿನ ಕೊನೆಯ ಮಹಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಶರವು ರಿಕ್ರಿಯೇಶನ್ ಕ್ಲಬ್ಬಿನಲ್ಲಿ ಈ ಅಕ್ರಮ ಜೂಜಾಟ ನಡೆಯುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಟ್ವಾಳ ಎಎಸ್ಪಿ ಅವರು ಈ ದಾಳಿ ಸಂಘಟಿಸಿದ್ದಾರೆ. 

ದಾಳಿ ವೇಳೆ ಸುಮಾರು 2 ತಾಸಿಗೂ ಮೀರಿದ ದೀರ್ಘ ಸಮಯ ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಪೆರೇಡ್ ರೀತಿಯಲ್ಲಿ ಇಲಾಖಾ ವ್ಯಾನ್ ಮೂಲಕ ಠಾಣೆಗೆ ಕರೆದೊಯುತ್ತಿದ್ದ ದೃಶ್ಯವನ್ನು ಸ್ಥಳದಲ್ಲಿ ಜಮಾಯಿಸಿದ್ದ ಭಾರೀ ಸಂಖ್ಯೆಯ ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸುತ್ತಿರುವುದು ಕಂಡು ಬಂತು. 

ಜೂಜಾಟ ಕೇಂದ್ರದಲ್ಲಿ ಸುಮಾರು 200ಕ್ಕೂ ಅಧಿಕ ಮಂದಿ ಜಮಾಯಿಸಿದ್ದರು ಎನ್ನಲಾಗಿದ್ದು, ಪೊಲೀಸ್ ವ್ಯಾನ್ ಮೂಲಕ ನಾಲ್ಕೈದು ಟ್ರಿಪ್ ಅವರನ್ನು ಠಾಣೆಗೆ ಸಾಗಿಸಲಾಯಿತು. ಜೊತೆಗೆ ಎಎಸ್ಪಿ ಹಾಗೂ ಇನ್ಸ್‍ಪೆಕ್ಟರ್ ಅವರ ಇಲಾಖಾ ಜೀಪ್ ಕೂಡಾ ದಾಳಿಯಲ್ಲಿ ಭಾಗವಹಿಸಿದ್ದವು. 

ಏಕಾಏಕಿ ಪೊಲೀಸರು ದಾಳಿ ನಡೆಸಿದ ಪರಿಣಾಮ ಸಂಕೀರ್ಣದ ಕೊನೆಯ ಮಹಡಿಯಲ್ಲಿ ಕ್ಲಬ್ ಇದ್ದುದರಿಂದ ಯಾರಿಗೂ ಪೊಲೀಸರ ಕೈಯಿಂದ ತಪ್ಪಿಸುವಂತಿರಲಿಲ್ಲ. ರಾತ್ರಿವರೆಗೂ ವಶಕ್ಕೆ ಪಡೆದವರ ತೀವ್ರ ವಿಚಾರಣೆ ನಡೆಸಿದ ಪೊಲೀಸರು ಬಳಿಕ ಮಾಧ್ಯಮಗಳಿಗೆ ಅಧಿಕೃತ ಮಾಹಿತಿ ನೀಡಿದ್ದು, ದಾಳಿಯಲ್ಲಿ 28 ಜನ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಅಕ್ರಮ ಜೂಜಾಟಕ್ಕೆ ಬಳಸಿದ 26900/- ರೂಪಾಯಿ ಹಣ, ಒಂದು ಟೇಬಲ್, ಆರು ಕುರ್ಚಿಗಳು, 52 ಇಸ್ಪಿಟ್ ಹಾಳೆಗಳನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಕರ್ನಾಟಕ ಪೆÇಲೀಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಅಕ್ರಮ ಜೂಜಾಟ ಕೇಂದ್ರಕ್ಕೆ ಪೊಲೀಸ್ ದಾಳಿ, ನಗದು, ಸೊತ್ತು ಸಹಿತ 28 ಮಂದಿ ವಶಕ್ಕೆ Rating: 5 Reviewed By: karavali Times
Scroll to Top