ಉಪ್ಪಿನಂಗಡಿ, ಜೂನ್ 07, 2022 (ಕರಾವಳಿ ಟೈಮ್ಸ್) : 8ನೇ ತರಗತಿಯ ಅಪ್ರಾಪ್ತ ಶಾಲಾ ಬಾಲಕಿಯನ್ನು ನೆರೆಮನೆಯ ಯುವಕ, ಆರೋಪಿ ಮುನಾಸಿರ್ ಎಂಬಾತ ಬಲವಂತವಾಗಿ ಸರಣಿ ಅತ್ಯಾಚಾರ ನಡೆಸಿದ ಬಗ್ಗೆ ಆರೋಪಿಯ ವಿರುದ್ದ ಉಪ್ಪಿನಂಗಡಿ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿ ಮುನಾಸಿರ್ ಬಾಲಕಿಯ ನೆರೆಕರೆಯವನಾಗಿದ್ದು, ಆಗಾಗ ಬಾಲಕಿಯ ಮನೆಗೆ ಬಂದು ಹೋಗುತ್ತಿದ್ದನು. ಒಂದು ದಿನ ಮನೆಗೆ ಬಂದ ಈತ ಬಾಲಕಿಯನ್ನು ಪ್ರೀತಿಸುತ್ತೇನೆ ಎಂದು ಹೇಳಿದಾಗ ಬಾಲಕಿ ನಿರಾಕರಿಸಿದ್ದಾಳೆ. ಆದರೂ ಪದೇ ಪದೇ ಒತ್ತಾಯ ಮಾಡುತ್ತಿದ್ದ.
ಮೇ 30 ರಂದು ಬೆಳಿಗೆ ಸುಮಾರು 8.15ರ ವೇಳೆಗೆ ಬಾಲಕಿ ಮನೆಯಿಂದ ಶಾಲೆಗೆ ಹೊರಟು ಕಲ್ಲೇರಿ ಬಣದ ಬಳಿ ತಲುಪಿದಾಗ 8.30 ಗಂಟೆಗೆ ಆರೋಪಿ ಮುನಾಸಿರ್ ಆಕೆಯನ್ನು ಕಾರಲ್ಲಿ ಶಾಲೆಗೆ ಬಿಡುತ್ತೇನೆ ಎಂದು ಕೈ ಹಿಡಿದು ಕರೆದು ಕೊಂಡು ಹೋಗಿ ಶಾಲೆಗೆ ಬಿಡದೇ ಉಪ್ಪಿನಂಗಡಿಯ ಲಾಡ್ಜ್ ಗೆ ಕರೆದುಕೊಂಡು ಹೋಗಿ ರೂಂ ಗೊತ್ತುಪಡಿಸಿ ಅಲ್ಲಿ ಬಾಲಕಿಯ ಇಚ್ಛೆಗೆ ವಿರುದ್ದವಾಗಿ 5 ರಿಂದ 6 ಬಾರಿ ಲೈಂಗಿಕ ಸಂಬೋಗ ನಡೆಸಿರುತ್ತಾನೆ.
ಬಳಿಕ ಜೂನ್ 7 ರಂದು ಬಾಲಕಿ ಬೆಳಿಗ್ಗೆ 8.15 ರವೇಳೆಗೆ ಮನೆಯಿಂದ ಶಾಲೆಗೆ ಹೊರಟು ಕಲ್ಲೇರಿ ಬಣದ ಹತ್ತಿರ ತಲುಪಿದಾಗ ಆರೋಪಿ ಮುನಾಸಿರ್ ಮತ್ತದೇ ರೀತಿ ಬಲಾತ್ಕಾರವಾಗಿ ಕೈ ಹಿಡಿದು ಎಳೆದು ಕಾರಿನಲ್ಲಿ ಕುಳ್ಳಿರಿಸಿ ಉಪ್ಪಿನಂಗಡಿಯ ಲಾಡ್ಜ್ ರೂಮಿಗೆ ಕರೆದುಕೊಂಡು ಹೋಗಿ ಬಲವಂತವಾಗಿ 2-3 ಬಾರಿ ಲೈಂಗಿಕ ಸಂಭೋಗ ಮಾಡಿರುತ್ತಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಸಾಯುಸುತ್ತೇನೆ ಎಂದು ಹೇಳಿ ಲಾಡ್ಜ್ ನಿಂದ ಉಪ್ಪಿನಂಗಡಿ ಬಸ್ಸು ನಿಲ್ದಾಣದಲ್ಲಿ ಬಾಲಕಿಯನ್ನು ಬಿಟ್ಟು ಹೋಗಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಬಾಲಕಿ ತಿಳಿಸಿದ್ದಾಳೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 71/2022 ಕಲಂ 363, 376(2)(ಎನ್) 506 ಐಪಿಸಿ ಮತ್ತು ಕಲಂ 5 (ಎಲ್), 6 ಪೋಕ್ಸೋ ಕಾಯ್ದೆ 2012ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment