ಬಂಟ್ವಾಳ, ಜೂನ್ 30, 2022 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಬುಧವಾರದಿಂದ ಸುರಿಯುತ್ತಿರುವ ನಿರಂತರ ಮಳೆಗೆ ವ್ಯಾಪಕ ಮಳೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗುತ್ತಿದೆ.
ತಾಲೂಕಿನ ಮಂಚಿ ಗ್ರಾಮದ ಪುರುಷೋತ್ತಮ ಜಿ ಅವರ ಮನೆ ಆವರಣ ಗೋಡೆ ಅವರದೇ ತೋಟಕ್ಕೆ ಕುಸಿದು ಬಿದ್ದು ಕೃಷಿ ಹಾನಿ ಸಂಭವಿಸಿರುತ್ತದೆ. ನಿರ್ಬೈಲು ಮಸೀದಿ ತಡೆಗೋಡೆ ಹಮೀದ್ ಅವರ ತೋಟದ ಬಳಿಯ ತೋಡಿಗೆ ಬಿದ್ದು ತೋಡಿನ ನೀರು ಹಮೀದ್ ಅವರ ತೋಟಕ್ಕೆ ನುಗ್ಗಿ ಹಾನಿ ಸಂಭವಿಸಿದೆ. ಪತ್ತುಮುಡಿ ನಿವಾಸಿ ವಿಠಲ ಪ್ರಭು ಬಿನ್ ತಿಮ್ಮಯ್ಯ ಪ್ರಭು ಅವರ ಮನೆಯ ಹಿಂದಿನ ಗುಡ್ಡ ಕುಸಿದು ನೀರಿನ ಪೈಪು ಹಾಗೂ ಮನೆ ಹಿಂದಿನ ಗೋಡೆಗೆ ಹಾನಿಯಾಗಿರುತ್ತದೆ. ಪತ್ತುಮುಡಿ ನಿವಾಸಿ ಆಸ್ಯಮ್ಮ ಕೋಂ ಇಬ್ರಾಹಿಂ ಅವರ ಮನೆಗೆ ತಾಗಿರುವ ತಡೆಗೋಡೆ ಕುಸಿದು ಮನೆಗೆ ಹಾನಿ ಸಂಭವ ಸಾಧ್ಯತೆ ಇದೆ. ಪತ್ತುಮುಡಿ ನಿವಾಸಿ ಅವ್ವಮ್ಮ ಕೋಂ ಇಸ್ಮಾಯಿಲ್ ಅವರ ಮನೆಯ ಹಿಂದಿನ ಗುಡ್ಡೆ ಕುಸಿದು ಮನೆಗೆ ಹಾನಿ ಸಂಭವಿಸಿದೆ. ಪತ್ತುಮುಡಿ ನಿವಾಸಿ ಮಮ್ಮದೆ ಬ್ಯಾರಿ ಬಿನ್ ಅಬ್ದುಲ್ ಖಾದ್ರಿ ಅವರ ಮನೆ ಬದಿ ಗುಡ್ಡ ಕುಸಿದು ಮನೆ ಗೋಡೆ ಹಾನಿಗೊಂಡಿದೆ. ಪತ್ತುಮುಡಿ ನಿವಾಸಿ ರೈಹಾನಾ ಕೋಂ ಬಶೀರ್ ಅವರ ಮನೆಯ ಹಿಂದಿನ ಗುಡ್ಡ ಕುಸಿದು ಮನೆ ಗೋಡೆ ಕುಸಿಯುವ ಸಂಭವ ಇರುತ್ತದೆ.
ಸಾಲೆತ್ತೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದಿರುತ್ತದೆ. ನರಿಕೊಂಬು ಗ್ರಾಮದ ಊಜೊಟ್ಟು ಎಂಬಲ್ಲಿ ರಸ್ತೆಗೆ ಮಣ್ಣು ಕುಸಿದಿರುತ್ತದೆ. ಗೋಳ್ತಮಜಲು ಗ್ರಾಮದ ವಸಂತ ಬಿನ್ ಶೀನಪ್ಪ ಪೂಜಾರಿ ಅವರ ಮನೆ ಹತ್ತಿರದ ತಡೆ ಗೋಡೆ ಜರಿದಿರುತ್ತದೆ. ಬಿ ಮೂಡ ಗ್ರಾಮದ ಕಾಮಾಜೆ ನಿವಾಸಿ ಸರೋಜಿನಿ ಕೋಂ ರಾಮಚಂದ್ರ ಅವರ ವಾಸದ ಮನೆಯ ಎದುರಿನ ತಡೆಗೋಡೆ ಕುಸಿದು ವಾಸದ ಮನೆ ಭಾಗಶಃ ಹಾನಿಯಾಗಿರುತ್ತದೆ ಮತ್ತು ದ್ವಿಚಕ್ರ ವಾಹನ ಆಕ್ಟಿವಾ ಹೋಂಡಾ ಸಂಪೂರ್ಣ ಜಖಂಗೊಂಡಿದೆ. ಮಾಣಿ ಗ್ರಾಮದ ಉಷಾ ಕೋಂ ಹರೀಶ್ ಶೆಟ್ಟಿ ಅವರ ಮನೆಗೆ ಪೂರ್ತಿ ನೀರು ಆವರಿಸಿರುತ್ತದೆ.
ಸಜಿಪಮೂಡ ಗ್ರಾಮದ ಕಂಚಿಲ ನಿವಾಸಿ ಶಮೀಮಾ ಕೋಂ ಮೊಯಿದಿನ್ ಅವರ ಮನೆ ಹಿಂಭಾಗದ ಗೋಡೆ ಕುಸಿದು ಭಾಗಶಃ ಹಾನಿ ಸಂಭವಿಸಿದೆ. ಸಜಿಪಮುನ್ನೂರು ಗ್ರಾಮದ ಮಿತ್ತಕಟ್ಟ ನಿವಾಸಿ ಚೋಮ ಮೂಲ್ಯ ಬಿನ್ ಅಮ್ಮು ಮೂಲ್ಯ ಅವರ ಮನೆ ಹಿಂಭಾಗದ ಗುಡ್ಡ ಕುಸಿದು ಮನೆ ಶೀಟುಗಳಿಗೆ ಹಾನಿ ಸಂಭವಿಸಿದೆ.
0 comments:
Post a Comment