ಬಂಟ್ವಾಳ, ಜೂನ್ 16, 2022 (ಕರಾವಳಿ ಟೈಮ್ಸ್) : ತಾಲೂಕಿನ ಪುಣಚ ಗ್ರಾಮದ ಎರ್ಮೆತೊಟ್ಟಿ ಎಂಬಲ್ಲಿನ ಕೋರೆಯ ಸಮೀಪದ ದೇವಪ್ಪ ನಾಯ್ಕ ಎಂಬವರ ಜಮೀನಿನ ಖಾಲಿ ಮನೆಯ ಬಳಿಯ ಪೊದೆಯಲ್ಲಿ ಅಕ್ರಮ ದಾಸ್ತಾನಿರಿಸಲಾಗಿದ್ದ ಸ್ಫೋಟಕ ವಸ್ತುಗಳನ್ನು ವಿಟ್ಲ ಠಾಣಾ ಪಿಎಸ್ಸೈ ಸಂದೀಪ್ ಕುಮಾರ್ ಶೆಟ್ಟಿ ನೇತೃತ್ವದ ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಜಮೀನು ಮಾಲಕ ದೇವಪ್ಪ ಅವರಲ್ಲಿ ವಿಚಾರಿಸಿದಾಗ ಸಮೀಪದ ಕಪ್ಪು ಕಲ್ಲು ಕೋರೆಯ ಕಲ್ಲುಗಳನ್ನು ಸ್ಪೋಟಿಸಲು ಕೋರೆಯ ಮಾಲಕ ಮಹಮ್ಮದ್ ಕುಂಞÂ ಹಾಗೂ ಸ್ಫೋಟಿಸುವ ಕೆಲಸದ ಅಶೋಕ್ ಅವರು ದಾಸ್ತಾನು ಇಟ್ಟಿದ್ದಾರೆ ಎಂಬ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಮುಹಮ್ಮದ್ ಕುಂಞÂ ಹಾಗೂ ಅಶೋಕ್ ವಿರುದ್ದ ಠಾಣಾ ಅಪರಾಧ ಕ್ರಮಾಂಕ 97/2022 ಕಲಂ 9ಬಿ(1) ಸ್ಫೋಟಕ ಕಾಯ್ದೆ-1884ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಂAPEX POWER-90, Explosives (Classs-2) 25mmX125 gms, Manufactured by- A.P Explosives PrivateLimited ಎಂಬುದಾಗಿ ಬರೆದಿರುವ 6,120/- ರೂಪಾಯಿ ಮೌಲ್ಯದ ಜಿಲೆಟಿನ್ ಜೆಲ್ 510 ಕಡ್ಡಿಗಳನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
0 comments:
Post a Comment