ಬಂಟ್ವಾಳ, ಜೂನ್ 13, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ನಿವಾಸಿ ರುಕ್ಸಾನಾ ಕೋಂ ಅಬ್ದುಲ್ ಮಜೀದ್ ಅವರು ಸೋಮವಾರ ಮಾಣಿಯಿಂದ ಸ್ಕೂಟಿಯಲ್ಲಿ ತೆರಳುತ್ತಿದ್ದ ವೇಳೆ ಕೈಯಲ್ಲಿದ್ದ 50 ಗ್ರಾಂ ತೂಕದ ಚಿನ್ನಾಭರಣ ಹಾಗೂ ಮೊಬೈಲ್ ಇದ್ದ ವ್ಯಾನಿಟಿ ಬ್ಯಾಗನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಅವರು ಬಂಟ್ವಾಳ ನಗರ ಠಾಣೆಗೆ ದೂರು ಸಲ್ಲಿಸಿದ್ದರು.
ಮಹಿಳೆ ಕಳೆದುಕೊಂಡ ಬೆಲೆ ಬಾಳುವ ಸೊತ್ತುಗಳಿರುವ ವ್ಯಾನಿಟಿ ಬ್ಯಾಗ್ ಮಾಣಿ ಗ್ರಾಮದ ಅಟೋ ರಿಕ್ಷಾ ಚಾಲಕ ಶಂಕರ ನಾರಾಯಣ ಶೆಟ್ಟಿ ಬಿನ್ ಸೀತಾರಾಮ ಶೆಟ್ಟಿ ಅವರು ಮಾಣಿಯಿಂದ ಕಲ್ಲಡ್ಕಕ್ಕೆ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಕಾಣ ಸಿಕ್ಕಿರುತ್ತದೆ. ಈ ಬಗ್ಗೆ ಅವರು ಬ್ಯಾಗ್ ವಾರೀಸುದಾರರನ್ನು ಸಾಮಾಜಿಕ ಜಾಲ ತಾಣ ಹಾಗೂ ಸ್ಥಳೀಯರಿಂದ ಪಡೆದುಕೊಂಡು ಅದನ್ನು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರ ಸಮ್ಮುಖದಲ್ಲಿ ವಾರೀಸು ಮಹಿಳೆಗೆ ಹಸ್ತಾಂತರಿಸಿ ಮಾನವೀಯತೆ ಹಾಗೂ ತನ್ನ ಪ್ರಾಮಾಣಿಕ ಹೃದಯ ವೈಶಾಲ್ಯತೆ ಮರೆದಿದ್ದಾರೆ.
ಅಟೋ ರಿಕ್ಷಾ ಚಾಲಕ ಶಂಕರ ನಾರಾಯಣ ಶೆಟ್ಟಿ ಅವರ ಮಾನವೀಯತೆ, ಪ್ರಾಮಾಣಿಕತೆ ಹಾಗೂ ಹೃದಯ ವೈಶಾಲ್ಯತೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಬಂಟ್ವಾಳ ನಗರ ಪೊಲೀಸರು ಕೂಡಾ ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
0 comments:
Post a Comment