ಬಿ ಮೂಡ ಸರಕಾರಿ ಶಾಲೆಗೆ ರೋಟರಿ ಟೌನ್ ವತಿಯಿಂದ ನೆಲಹಾಸು ಹಾಗೂ ಪೈಟಿಂಗ್ ಕೊಡುಗೆ - Karavali Times ಬಿ ಮೂಡ ಸರಕಾರಿ ಶಾಲೆಗೆ ರೋಟರಿ ಟೌನ್ ವತಿಯಿಂದ ನೆಲಹಾಸು ಹಾಗೂ ಪೈಟಿಂಗ್ ಕೊಡುಗೆ - Karavali Times

728x90

9 June 2022

ಬಿ ಮೂಡ ಸರಕಾರಿ ಶಾಲೆಗೆ ರೋಟರಿ ಟೌನ್ ವತಿಯಿಂದ ನೆಲಹಾಸು ಹಾಗೂ ಪೈಟಿಂಗ್ ಕೊಡುಗೆ

ಬಂಟ್ವಾಳ, ಜೂನ್ 09, 2022 (ಕರಾವಳಿ ಟೈಮ್ಸ್) : ಬಂಟ್ವಾಳ ರೋಟರಿ ಟೌನ್ ಅಧ್ಯಕ್ಷ ಶನ್ಫತ್ ಶರೀಫ್ ಅವರ ಪ್ರಾಯೋಜಕತ್ವದಲ್ಲಿ ಬಿ ಸಿ ರೋಡಿನ ಅಜ್ಜಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೆಲಹಾಸು ಹಾಗೂ ಗೋಡೆಗೆ ಪೈಂಟಿಂಗ್ ಮಾಡುವ ಮೂಲಕ ಹೊಸ ಸ್ವರೂಪ ನೀಡಲಾಯಿತು. 

ರೋಟರಿ ಜಿಲ್ಲಾ ಗವರ್ನರ್ ಎ ಆರ್ ರವೀಂದ್ರ ಭಟ್ ಗುರುವಾರ ತನ್ನ ಭೇಟಿಯ ಸಂದರ್ಭ ನವೀಕೃತ ಅಕ್ಷರ ದಾಸೋಹ ಕೊಠಡಿಯನ್ನು ಶಾಲಾ ಉಪಯೋಗಕ್ಕೆ ಅರ್ಪಿಸಿದರು. 

ಈ ಸಂದರ್ಭ ರೋಟರಿ ನಿಯೋಜಿತ ಗವರ್ನರ್ ಪ್ರಕಾಶ್ ಕಾರಂತ, ಟೌನ್ ಅಧ್ಯಕ್ಷ ಶನ್ಫತ್ ಶರೀಫ್, ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಉಪಾಧ್ಯಕ್ಷ ಕಿಶೋರ್, ಕೋಶಾಧಿಕಾರಿ ಸುರೇಶ್ ಸಾಲಿಯಾನ್, ಆನ್ಸ್ ಅಧ್ಯಕ್ಷೆ ವಿದ್ಯಾ ಉಮೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಮಾಂಬಾಡಿ ಉಪಸ್ಥಿತರಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಬಿ ಮೂಡ ಸರಕಾರಿ ಶಾಲೆಗೆ ರೋಟರಿ ಟೌನ್ ವತಿಯಿಂದ ನೆಲಹಾಸು ಹಾಗೂ ಪೈಟಿಂಗ್ ಕೊಡುಗೆ Rating: 5 Reviewed By: karavali Times
Scroll to Top