ಬಂಟ್ವಾಳ, ಜೂನ್ 18, 2022 (ಕರಾವಳಿ ಟೈಮ್ಸ್) : ತಾಲೂಕಿನ ಗೂಡಿನಬಳಿ ಬಿ ಮೂಡ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಅಝ್ಮಿಯಾ ಬೊಳ್ಳಾಯಿ ಅವರು 551 ಅಂಕಗಳನ್ನು ಪಡೆದು 91.83 ಶೇಕಡಾ ಫಲಿತಾಂಶ ದಾಖಲಿಸಿ ಡಿಸ್ಟಿಂಕ್ಷನ್ ನೊಂದಿಗೆ ತೇರ್ಗಡೆ ಹೊಂದಿದ್ದಾರೆ.
ಈಕೆ ಬೊಳ್ಳಾಯಿ ನಿವಾಸಿ, ಸಜಿಪಮೂಡ ಗ್ರಾ ಪಂ ಮಾಜಿ ಸದಸ್ಯ, ಸಜಿಪಮೂಡ ವಲಯ ಕಾಂಗ್ರೆಸ್ ಅಧ್ಯಕ್ಷ ಎನ್ ಅಬ್ದುಲ್ ಕರೀಂ ಹಾಗೂ ಆಯಿಷಾ ದಂಪತಿಯ ಪುತ್ರಿಯಾಗಿರುತ್ತಾಳೆ. ಈಕೆ ಮಂಚಿ ಸರಕಾರಿ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲೂ 560 ಅಂಕಗಳನ್ನು ಪಡೆದು 90 ಶೇಕಡಾ ಫಲಿತಾಂಶ ದಾಖಲಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು.
0 comments:
Post a Comment