ಮಂಗಳೂರು, ಜೂನ್ 14, 2022 (ಕರಾವಳಿ ಟೈಮ್ಸ್) : ಅಂಚೆ ಉಳಿತಾಯ ಖಾತೆಗಳಿಗೆ ಇದೀಗ ನೆಫ್ಟ್/ ಆರ್ ಟಿ ಜಿ ಎಸ್ ಸೌಲಭ್ಯವನ್ನು ಒದಗಿಸಲಾಗಿದೆ. ಯಾವುದೇ ಬ್ಯಾಂಕ್ ಖಾತೆಯಿಂದ ಅಂಚೆ ಉಳಿತಾಯ ಖಾತೆಗೆ ನೆಫ್ಟ್/ ಆರ್ ಟಿ ಜಿ ಎಸ್ ಮುಖಾಂತರ ಹಣ ವರ್ಗಾವಣೆ ಮಾಡಬಹುದಾಗೆದೆ ಹಾಗೂ ಅಂಚೆ ಉಳಿತಾಯ ಖಾತೆಯಿಂದ ಯಾವುದೇ ಬ್ಯಾಂಕ್ ಖಾತೆಗಳಿಗೂ ನೆಫ್ಟ್/ ಆರ್ ಟಿ ಜಿ ಎಸ್ ಮುಖಾಂತರ ಹಣ ವರ್ಗಾವಣೆ ಮಾಡಬಹುದಾಗೆದೆ.
ದೇಶಾದಾದ್ಯಂತ 1,56,000ಕ್ಕಿಂತ ಹೆಚ್ಚು ಅಂಚೆ ಕಛೇರಿಗಳಿದ್ದರೂ, ನೆಫ್ಟ್/ ಆರ್ ಟಿ ಜಿ ಎಸ್ ಉದ್ದೇಶಕ್ಕೆ ಎಲ್ಲಾ ಅಂಚೆ ಕಛೇರಿಗಳ ಖಾತೆಗಳಿಗೂ ‘ಒಂದು ದೇಶ, ಒಂದು ಐಎಫ್‍ಎಸ್‍ಸಿ ಕೋಡ್’ ನಿಯಮದಡಿಯಲ್ಲಿ ಒಂದೇ ಐಎಫ್‍ಎಸ್‍ಸಿ ಕೋಡ್ ‘IPOS0000DOP’ ನ್ನು ನೀಡಲಾಗಿದೆ.
ಈ ಸೌಲಭ್ಯದಿಂದಾಗಿ ಈಗ ಅಂಚೆ ಕಚೇರಿಯಲ್ಲಿ ಹಿರಿಯ ನಾಗರೀಕರ ಖಾತೆ (ಎಸ್.ಸಿ.ಎಸ್.ಎಸ್.), ತಿಂಗಳ ಆದಾಯ ಖಾತೆ (ಎಂ.ಐ.ಎಸ್), ಎನ್.ಎಸ್.ಸಿ., ಕೆವಿಪಿ, ಪಿಪಿಎಫ್, ಎಸ್.ಎಸ್.ಎ. 1,2,3 ಹಾಗೂ 5 ವರ್ಷಗಳ ಟಿ.ಡಿ. ಖಾತೆ (ಫಿಕ್ಸೆಡ್ ಡೆಪಾಸಿಟ್ ಖಾತೆ) ತೆರೆಯಲು ಚೆಕ್ ಮುಖಾಂತರ ಹಣ ವರ್ಗಾಯಿಸುವ ಬದಲು, ನೆಫ್ಟ್/ ಆರ್ ಟಿ ಜಿ ಎಸ್ ಮುಖಾಂತರ ಅಂಚೆ ಉಳಿತಾಯ ಖಾತೆಗೆ ತಮ್ಮದೇ ಬ್ಯಾಂಕ್ ಖಾತೆಯಿಂದ ನೆಟ್ ಬ್ಯಾಂಕಿಂಗ್/ ಮೊಬೈಲ್ ಬ್ಯಾಂಕಿಗ್ ಮುಖಾಂತರ ಅಥವಾ ಬ್ಯಾಂಕ್ ಬ್ರ್ಯಾಂಚ್ ಗೆ ಬೇಟಿ ನೀಡಿ ಹಣ ವರ್ಗಾಯಿಸಲು ಕೋರಿಕೆ ಸಲ್ಲಿಸಬಹುದು, ಅಂಚೆ ಕಛೇರಿಯ ಸುಕನ್ಯಾ ಸಮೃದ್ದಿ (ಎಸ್.ಎಸ್.ಎ), ಪಿ.ಪಿ.ಎಫ್ ಖಾತೆಗಳಿಗೆ ನೆಫ್ಟ್ ಮೂಲಕ ನೇರವಾಗಿ ಬ್ಯಾಂಕ್ ಖಾತೆಯಿಂದಲೇ ಹಣ ಜಮಾ ಮಾಡಬಹುದು, ಶಾಖಾ ಅಂಚೆ ಕಛೇರಿಯ ಗ್ರಾಹಕರಿಗೂ ಈ ಸೌಲಭ್ಯ ಲಭ್ಯವಿದೆ. ಶಾಖಾ ಅಂಚೆ ಕಛೇರಿಗಳಲ್ಲಿ ಗ್ರಾಹಕರು ನೀಡಿದ ನೆಫ್ಟ್ ಅರ್ಜಿ ಫಾರಂಗಳನ್ನು ಅದೇ ದಿನ ಸಂಬಂಧಪಟ್ಟ ಇಲಾಖಾ ಅಂಚೆ ಕಛೇರಿಗಳ ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು, ಶಾಖಾ ಅಂಚೆ ಕಛೇರಿಯ ಗ್ರಾಹಕರು ಸಂಬಂಧಿಸಿದ ಇಲಾಖಾ ಅಂಚೆ ಕಛೇರಿಗಳಲ್ಲದೆ ಯಾವುದೇ ಇಲಾಖಾ ಅಂಚೆ ಕಛೇರಿಗಳ ಮೂಲಕವೂ ನೆಫ್ಟ್ ಸೌಲಭ್ಯ ಪಡೆಯಬಹುದು, ಬೇರೆ ಬ್ಯಾಂಕುಗಳ ನೆಟ್ ಬ್ಯಾಂಕಿಂಗ್/ ಮೊಬೈಲ್ ಬ್ಯಾಂಕಿಂಗ್ ಪೆÇೀರ್ಟಲ್‍ಗಳ ಎಪಿಪಿಗಳಲ್ಲಿ, ಅಂಚೆ ಕಛೇರಿ ಖಾತೆಗೆ ಹಣ ನೆಫ್ಟ್ ಮೂಲಕ ವರ್ಗಾವಣೆ ಮಾಡಲು “ಸರ್ಚ್ ಇನ್ ಐ.ಎಫ್.ಎಸ್.ಸಿ.ಕೋಡ್” ಮೂಲಕ ಹುಡುಕುವಾಗ ಆರಿಸಲು ಲಭ್ಯವಾಗುವುದು ಎಂದು ಅಂಚೆ ಕಚೇರಿ ಮಂಗಳೂರು ವಿಭಾಗೀಯ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment