ಬಂಟ್ವಾಳ, ಜೂನ್ 26, 2022 (ಕರಾವಳಿ ಟೈಮ್ಸ್) : ತಾಲೂಕಿನ 3 ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಮುಖಾಂತರ ನ್ಯಾಯಾಲಯದ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಶನಿವಾರ (ಜೂನ್ 25) ಲೋಕ ಅದಾಲತ್ ಹಮ್ಮಿಕೊಳ್ಳಲಾಗಿತ್ತು.
3 ನ್ಯಾಯಾಲಯಗಳಲ್ಲಿ ಒಟ್ಟು 31 ಸಿವಿಲ್ ದಾವೆಗಳು, 574 ಕ್ರಿಮಿನಲ್ ಪ್ರಕರಣಗಳು, 16 ಚೆಕ್ ಅಮಾನ್ಯ ಪ್ರಕರಣಗಳು, 16 ಮೋಟಾರ್ ಆಕ್ಸಿಡೆಂಟ್ ಪ್ರಕರಣಗಳು, 5 ವಿವಾಹ ವಿಚ್ಚೇದನಕ್ಕೆ ಸಂಬಂಧಪಟ್ಟ ಪ್ರಕರಣಗಳು, 2 ಬ್ಯಾಂಕ್ ಗೆ ಸಾಲ ಮರುಪಾವತಿ ಪ್ರಕರಣ ಗಳು ರಾಜಿ ಸಂಧಾನದ ಮೂಲಕ ಇತ್ಯರ್ಥವಾಯಿತು.
ಲೋಕ ಆಧಾಲತ್ ನಲ್ಲಿ ಒಟ್ಟು 641 ಪ್ರಕರಣಗಳು ಇತ್ಯರ್ಥಗೊಂಡಿದೆ. ಲೋಕ ಅದಾಲತ್ ಗೆ ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ಬಿ ಗಣೇಶಾನಂದ ಸೋಮಯಾಜಿ, ಪ್ರಧಾನ ಕಾರ್ಯದರ್ಶಿ ವೀರೇಂದ್ರ ಎಂ ಸಿದ್ದಕಟ್ಟೆ, ಕೋಶಾಧಿಕಾರಿ ಚಂದ್ರಶೇಖರ ಬೈರಿಕಟ್ಟೆ ಸಹಿತ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.
0 comments:
Post a Comment