ಬಂಟ್ವಾಳ, ಜೂನ್ 16, 2022 (ಕರಾವಳಿ ಟೈಮ್ಸ್) : ಕಾರ್ಮಿಕ ಇಲಾಖೆ ಮಂಗಳೂರು, ಕಾರ್ಮಿಕ ನಿರೀಕ್ಷಕರು ಬಂಟ್ವಾಳ ವೃತ್ತ ಇವುಗಳ ನೇತೃತ್ವದಲ್ಲಿ ಬಿ ಸಿ ರೋಡಿನ ರಂಗೋಲಿ ಸಭಾಂಗಣದಲ್ಲಿ ಪಿ ಎಂ ಎಸ್ ವೈ ಎಂ ಅಕಾಂ ಅಂತ್ಯೋದಯ ಕ್ಯಾಂಪೇನ್ 90 ದಿನಗಳ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಹಾಜರಿದ್ದ ಅಸಂಘಟಿತ ಕಾರ್ಮಿಕರಿಗೆ ಸ್ಥಳದಲ್ಲೇ ನೋಂದಣಿ ಮಾಡಿ ಕಾರ್ಡ್ ವಿತರಿಸಲಾಯಿತು
ಸಿ ಎಸ್ ಸಿ ದ ಕ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಕಛೇರಿ ಸಿಬ್ಬಂದಿಗಳು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ವಿವಿಧ ವಲಯದ ಅಸಂಘಟಿತ ಕಾರ್ಮಿಕರು ಹಾಗೂ ಸಿ ಎಸ್ ಸಿ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
0 comments:
Post a Comment