ಮಂಗಳೂರು, ಜುಲೈ 01, 2022 (ಕರಾವಳಿ ಟೈಮ್ಸ್) : ಗುರುವಾರ ರಾತ್ರಿ ಚಂದ್ರದರ್ಶನ ಖಚಿತಗೊಂಡ ಹಿನ್ನಲೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಶುಕ್ರವಾರ (ಜುಲೈ 1) ದ್ಸುಲ್ ಹಜ್ ಮಾಸಾರಂಭ ಎಂದು ಘೋಷಿಸಿರುವ ಖಾಝಿಗಳಾದ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್, ಸಯ್ಯಿದ್ ಕೂರ ತಂಙಳ್ ಹಾಗೂ ಹಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರು ಜುಲೈ 9 ರ ಶನಿವಾರ ಅರಫಾ ದಿನದ ಉಪವಾಸ ವೃತ ಹಾಗೂ ಜುಲೈ 10 ರ ಭಾನುವಾರ ಈದುಲ್ ಅಳ್ ಹಾ (ಬಕ್ರೀದ್) ಹಬ್ಬ ಆಚರಿಸುವಂತೆ ಘೋಷಿಸಿದ್ದಾರೆ.
ಬುಧವಾರ ಅಸ್ತ ಗುರುವಾರ ರಾತ್ರಿ ಮೋಡ ಹಾಗೂ ವಿಪರೀತ ಮಳೆಯ ಹಿನ್ನಲೆಯಲ್ಲಿ ಚಂದ್ರದರ್ಶನದ ಯಾವುದೇ ಮಾಹಿತಿ ಇಲ್ಲದ ಹಿನ್ನಲೆಯಲ್ಲಿ ದ್ಸುಲ್ ಕಹದ್ 30 ಪೂರ್ಣಗೊಳಿಸಿ ಗುರುವಾರ ಅಸ್ತ ಶುಕ್ರವಾರ ರಾತ್ರಿ ದ್ಸುಲ್ ಹಜ್ ಚಂದ್ರದರ್ಶನ ಖಚಿತಪಡಿಸಿ ಖಾಝಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ.
ಹಜ್ ಕರ್ಮ ನಿರ್ವಹಣೆಯ ಪ್ರದೇಶ ಮಕ್ಕಾ ಸಹಿತವಾಗಿರುವ ಸೌದಿ ಅರೇಬಿಯಾದಲ್ಲಿ ಜುಲೈ 8 ರ ಶುಕ್ರವಾರ ಅರಫಾ ಹಾಗೂ ಜು 9 ರ ಶನಿವಾರ ಬಕ್ರೀದ್ ಹಬ್ಬ ಆಚರಣೆ ಎಂದು ಬುಧವಾರ ಘೋಷಿಸಲಾಗಿತ್ತು.
0 comments:
Post a Comment