ಬಂಟ್ವಾಳ, ಜೂನ್ 08, 2022 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರದ ಪಿಎಂ-ಎಸ್ ವೈ ಎಂ ಯೋಜನೆಯಡಿ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಣಿ ಮಾಡಿಸಲು ಭಾರತ ಸರಕಾರದ ಗ್ರಾಮೀಣಾಭಿವೃದ್ದಿ ಮಂತ್ರಾಲಯ 90 ದಿನಗಳ ಅಕಾಂ ಅಂತ್ಯೋದಯ ಕ್ಯಾಂಪೇನ್ ದೇಶದ 75 ಜಿಲ್ಲೆಗಳಲ್ಲಿ ನಡೆಸುತ್ತಿದ್ದು, ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯು ಸದ್ರಿ ಕ್ಯಾಂಪೇನಿಗೆ ಆಯ್ಕೆಯಾಗಿರುತ್ತದೆ. ಈ ಹಿನ್ನಲೆಯಲ್ಲಿ ಜೂನ್ 14 ರಂದು ಬಿ ಸಿ ರೋಡಿನ ರಂಗೋಲಿ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಅಸಂಘಟಿತ ಕಾರ್ಮಿಕ ಉಚಿತ ನೋಂದಣಿ ಕಾರ್ಯಕ್ರಮ ನಡೆಯಲಿದೆ.
ಗ್ರಾಮೀಣಾಭಿವೃದ್ದಿ ಮಂತ್ರಾಲಯವು 17 ಯೋಜನೆಗಳನ್ನು ಸದ್ರಿ ಕ್ಯಾಂಪೇನ್ ಅಡಿ ಆಯ್ಕೆ ಮಾಡಿದ್ದು, ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ-ಧನ ಯೋಜನೆಯು ಅದರಲ್ಲಿ ಒಳಗೊಂಡಿದೆ. ಈ ಯೋಜನೆಯ ಜಿಲ್ಲಾದ್ಯಂತ ನಡೆಯಲಿದ್ದು, ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಸಿ ಎಸ್ ಸಿ ಇ-ಗವರ್ನೆನ್ಸಿ ಸರ್ವಿಸಸ್ ಇಂಡಿಯಾ ದ ಕ ಮಂಗಳೂರು ಇದರ ಸಹಯೋಗದೊಂದಿಗೆ ನೋಂದಣಿ ಕಾರ್ಯಕ್ರಮ ಜುಲೈ 26 ರವರೆಗೆ ವಿವಿಧೆಡೆ ಉಚಿತವಾಗಿ ನಡೆಯಲಿದೆ.
18 ವರ್ಷದಿಂದ 40 ವರ್ಷದೊಳಗಿನ ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಇದರ ಪ್ರಯೋಜನ ಪಡೆಯಬಹುದಾಗಿದ್ದು, ವಯಸ್ಸಿಗನುಗುಣವಾಗಿ ಮಾಸಿಕ ಕನಿಷ್ಠ 55 ರೂಪಾಯಿಯಿಂದ 200 ರೂಪಾಯಿವರೆಗೆ ವಂತಿಗೆ ಪಾವತಿ ಮಾಡಬೇಕಾಗುತ್ತದೆ. ಕೇಂದ್ರ ಸರಕಾರದ ವತಿಯಿಂದ ಅಷ್ಟೇ ವಂತಿಗೆಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತದೆ. ಈ ಕ್ರೋಢೀಕೃತ ಮೊತ್ತದ ಆಧಾರದಲ್ಲಿ ವಂತಿಗೆದಾರರಿಗೆ 60 ವರ್ಷ ಪೂರ್ಣಗೊಂಡ ನಂತರ ಮಾಸಿಕ ಕನಿಷ್ಠ 3 ಸಾವಿರ ರೂಪಾಯಿಗಳ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರಾಗುತ್ತಾರೆ.
ಕಾರ್ಮಿಕರು ಆಧಾರ್ ಕಾರ್ಡ್, ಫೋಟೋ, ಬ್ಯಾಂಕ್ ಪಾಸ್ ಪುಸ್ತಕ ಹಾಗೂ ಮೊದಲ ತಿಂಗಳ ವಂತಿಗೆ ಪಾವತಿಸಿ ಸಮೀಪದ ಸೇವಾ ಕೇಂದ್ರಗಳಲ್ಲಿ ಪಿಎಂ-ಎಸ್ ವೈ ಎಂ ಯೋಜನೆಯಡಿ ನೋಂದಾಯಿಸಿ ಕಾರ್ಡ್ ಪಡೆಯಬಹುದಾಗಿದೆ. ಈ ಬಗ್ಗೆ ವಿವರಗಳಿಗೆ ಬಂಟ್ವಾಳ ಕಾರ್ಮಿಕ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 08255 200010 ಗೆ ಸಂಪರ್ಕಿಬಹುದು ಎಂದು ಕಾರ್ಮಿಕ ನಿರೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment