ಮಂಗಳೂರು, ಜೂನ್ 26, 2022 (ಕರಾವಳಿ ಟೈಮ್ಸ್) : ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನವಾದ ಜೂನ್ 26 ರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ ಪೈಕಿ ಪ್ರಸ್ತುತ ಠಾಣೆಗಳಲ್ಲಿ ವಿಲೇವಾರಿಯಾಗದೆ ಬಾಕಿಯಾಗಿರುವ ಮಾದಕ ವಸ್ತುಗಳ ವಿಲೇವಾರಿಗೊಳಿಸುವ ಸಂಬಂಧ ನ್ಯಾಯಾಲಯಗಳಿಂದ ಆದೇಶ ಪಡೆದು ನಾಶಪಡಿಸಲಾಯಿತು.
ಜಿಲ್ಲಾ ಎಸ್ಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಮಾದಕ ದ್ರವ್ಯ ವಿಲೇವಾರಿ ಸಮಿತಿ ಅಧ್ಯಕ್ಷ ಸೊನಾವಣೆ ಋಷಿಕೇಶ್ ಭಗವಾನ್ ಸದಸ್ಯರುಗಳಾದ ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್, ಪುತ್ತೂರು ಎಎಸ್ಪಿ ಗಾನಾ ಪಿ ಕುಮಾರ್ ಅವರ ಸಮಕ್ಷದಲ್ಲಿ ವಿವಿಧ ಠಾಣೆಗಳ 11 ¥್ರÀಕರಣಗಳಲ್ಲಿ ಸುಮಾರು 23,75,300/- ರೂಪಾಯಿ ಮೌಲ್ಯದ 53 ಕೆ ಜಿ 128 ಗ್ರಾಂ ಮಾದಕ ವಸ್ತು ಗಾಂಜಾ, ಸುಮಾರು 30 ಸಾವಿರ ರೂಪಾಯಿ ಮೌಲ್ಯದ 120 ಗ್ರಾಂ ಹೆರಾಯಿನ್ ನ್ನು ಬಯೋಮೆಡಿಕಲ್ ತ್ಯಾಜ್ಯ ನಿರ್ವºಣೆ, ಸಂಸ್ಕರಣೆ ಮತ್ತು ವಿಲೇವಾರಿ ಘಟಕವಾದ ಮೆ ರಾಮ್ಕಿ ಎನರ್ಜಿ ಮತ್ತು ಎನ್ವಿರೇನ್ ಮೆಂಟ್ ಲಿ. ಅವರಿಗೆ ಹಸ್ತಂತರಿಸಿ ನಾಶಪಡಿಸಲಾಯಿತು.
0 comments:
Post a Comment