ಬಂಟ್ವಾಳ, ಜೂನ್ 16, 2022 (ಕರಾವಳಿ ಟೈಮ್ಸ್) : ಸರಕಾರಿ ವೈದ್ಯರ ಸಹಿ, ಸೀಲ್ ನಕಲಿ ಮಾಡಿದ ಪ್ರಕರಣದಲ್ಲಿ ವಿಟ್ಲದ ಡ್ರೈವಿಂಗ್ ಸ್ಕೂಲ್ ಮಾಲಿಕ, ವಿಟ್ಲ ಶಾಲಾ ರಸ್ತೆ ನಿವಾಸಿ ಶೇಖ್ ಫಿರೋಝ್ ಆದಂ (26) ಎಂಬಾತನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ವಿಟ್ಲದ ನ್ಯಾಷನಲ್ ಡ್ರೈವಿಂಗ್ ಸ್ಕೂಲ್ ಮಾಲಕನಾಗಿರುವ ಆರೋಪಿ ಗ್ರಾಹಕರೊಬ್ಬರ ಡ್ರೈವಿಂಗ್ ಲೈಸೆನ್ಸ್ ನವೀಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪ್ರಮಾಣ ಪತ್ರಕ್ಕೆ ವಿಟ್ಲ ಸಮುದಾಯ ಆಸ್ಪತ್ರೆಯ ವೈದ್ಯೆಯ ಸಹಿ ಮತ್ತು ಸೀಲ್ ನಕಲಿ ಮಾಡಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ವೈದ್ಯೆ ವೇದಾವತಿ ಬಲ್ಲಾಳ್ ನೀಡಿದ ದೂರಿನಂತೆ ನಕಲಿ ಸಹಿ ಹಾಗೂ ಸೀಲ್ ಆರೋಪದಡಿ ಆರೋಪಿಯನ್ನು ಬಂಧಿಸಿದ ಪೆÇಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
0 comments:
Post a Comment