ಬಂಟ್ವಾಳ, ಜೂನ್ 18, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬಳಿಯ ಬೋಳಂಗಡಿ ನರಹರಿ ಪರ್ವತ ಸಮೀಪ ಶುಕ್ರವಾರ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಆರೋಪಿಗಳಾದ ಕಬಕ ಸಮೀಪದ ಪರನೀರು ಕಟ್ಟೆ ನಿವಾಸಿ ದಿವಂಗತ ಅಬ್ದುಲ್ ಖಾದರ್ ಅವರ ಪುತ್ರ ಮುಹಮ್ಮದ್ ರಫೀಕ್ ಅಲಿಯಾಸ್ ಮುನ್ನಾ (44) ಪುತ್ತೂರು ತಾಲೂಕು, ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ನಿವಾಸಿ ದಿವಂಗತ ಅಣ್ಣು ಪೂಜಾರಿ ಅವರ ಪುತ್ರ ತಾರಾನಾಥ ಪೂಜಾರಿ ಅಲಿಯಾಸ್ ಪುಟ್ಟ (27) ಅವರನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಪೊಲೀಸರು ಏಳೂವರೆ ಸಾವಿರ ರೂಪಾಯಿ ಮೌಲ್ಯದ 355 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ ಅವರ ನಿರ್ದೇಶನದಂತೆ ನಗರ ಪೆÇೀಲೀಸ್ ಠಾಣಾ ಇನ್ಸ್ ಪೆಕ್ಟರ್ ವಿವೇಕಾನಂದ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಕ್ರೈಂ ಎಸ್ಸೈ ಕಲೈಮಾರ್ ಅವರ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ತಂಡದಲ್ಲಿ ಎಎಸೈ ಶಿವರಾಮ ನಾಯ್ಕ್, ಸಿಬ್ಬಂದಿಗಳಾದ ಉದಯ ರೈ, ಕುಮಾರ್, ನಾಗರಾಜ್, ಇರ್ಶಾದ್, ಮೋಹನ್ ಪಾಲ್ಗೊಂಡಿದ್ದರು.
ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅಪರಾಧ ಕ್ರಮಾಂಕ 62/2022 ಕಲಂ 8(ಸಿ), 20(ಬಿ)(11)(ಎ) ಎನ್ ಡಿ ಪಿ ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment