ಬಂಟ್ವಾಳ, ಜೂನ್ 30, 2022 (ಕರಾವಳಿ ಟೈಮ್ಸ್) : ತಾಲೂಕಿನ ಬಂಟ್ವಾಳ ವಿದ್ಯಾಗಿರಿ ಎಸ್ ವಿ ಎಸ್ ಕಾಲೇಜು ಬಳಿ ರಸ್ತೆಯಲ್ಲಿ ತ್ರಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ಭಿನ್ನಚೇತನ ವ್ಯಕ್ತಿ, ಸಜಿಪನಡು ಗ್ರಾಮದ ಗೋಳಿಪಡ್ಪು ನಿವಾಸಿ ಇಸ್ಮಾಯಿನ್ ಮದನಿ ಅವರ ಮೇಲೆ ಬುಧವಾರ ಸಂಜೆ ವಿದ್ಯುತ್ ಕಂಬ ಹಾಗೂ ಮರದ ಗೆಲ್ಲು ಮುರಿದು ಬಿದ್ದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬಂಟ್ವಾಳ ಎಸ್ ವಿ ಎಸ್ ಕಾಲೇಜು ಕಾಲೇಜು ಸಮೀಪ ರಸ್ತೆಯಲ್ಲಿ ಹೋಗುತ್ತಿರುವ ಸಂದರ್ಭ ಗಾಳಿ-ಮಳೆಗೆ ಮರದ ಗೆಲ್ಲು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮವಾಗಿ ಮರದ ಗೆಲ್ಲು ಹಾಗೂ ವಿದ್ಯುತ್ ಕಂಬ ಏಕಕಾಲದಲ್ಲಿ ರಸ್ತೆಗೆ ಉರುಳಿ ಬಿದ್ದ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಇಸ್ಮಾಯಿಲ್ ಅವರ ತ್ರಿಚಕ್ರ ವಾಹನದ ಮೇಲೆ ಬಿದ್ದು ಈ ಅವಘಡ ಸಂಭವಿಸಿದೆ.
ಘಟನೆಯಿಂದ ಇಸ್ಮಾಯಿಲ್ ಅವರ ವಾಹನ ಜಖಂಗೊಂಡಿದ್ದು, ಇಸ್ಮಾಯಿಲ್ ಅವರಿಗೂ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಗಾಯಾಳು ಇಸ್ಮಾಯಿಲ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೆÇೀಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
0 comments:
Post a Comment