ಬಂಟ್ವಾಳ, ಜೂನ್ 06, 2022 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ಮುಖ್ಯಾಧಿಕಾರಿಯಾಗಿದ್ದ ಶ್ರೀಮತಿ ಲೀನಾ ಬ್ರಿಟ್ಟೋ ಅವರ ವರ್ಗಾವಣೆಯಾದ ಖಾಲಿ ಸ್ಥಾನಕ್ಕೆ ಸುಳ್ಯ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯಾಗಿದ್ದ ಎಂ ಆರ್ ಸ್ವಾಮಿ ಅವರನ್ನು ನೇಮಿಸಿ ಸರಕಾರ ಆದೇಶಿಸಿದ ಪ್ರಕಾರ ಸ್ವಾಮಿ ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಸ್ವಾಮಿ ಅವರು ಸುಳ್ಯ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ಸಮಸ್ಯೆ ಮೊದಲಾದ ಇತರ ಸಮಸ್ಯೆಗಳಿಗೆ ಜಾಣ್ಮೆಯ ಪರಿಹಾರ ಒದಗಿಸಿ ಅನುಭವ ಇರುವ ಬಂಟ್ವಾಳ ಪುರಸಭೆಯಲ್ಲಿ ಹಲವು ವರ್ಷಗಳಿಂದ ತಾಂಡವವಾಡುತ್ತಿರುವ ತ್ಯಾಜ್ಯ ಸಮಸ್ಯೆ ಹಾಗೂ ಅಕ್ರಮ ಕಟ್ಟಡ, ಅಂಗಡಿಗಳು ಪುರಸಭಾ ನೋಟೀಸು ಹಾಗೂ ನ್ಯಾಯಾಲಯದ ಸೂಚನೆಗಳನ್ನೂ ಮೀರಿ ಕಾರ್ಯಾಚರಿಸುತ್ತಿರುವ ಬಗ್ಗೆ ಯಾವ ರೀತಿಯಲ್ಲಿ ಕಠಿಣ ಕ್ರಮ ಜರುಗಿಸುತ್ತಾರೆ ಎಂಬುದರ ಬಗ್ಗೆ ಪುರವಾಸಿಗಳು ಕಾತರರದಿಂದ ಕಾಯುತ್ತಿದ್ದಾರೆ.
ನೂತನ ಮುಖ್ಯಾಧಿಕಾರಿಗಳನ್ನು ಪುರವಾಸಿಗಳ ಪರವಾಗಿ ನಾಗರಿಕರ ನಿಯೋಗ ಪುರಸಭಾ ಕಚೇರಿಗೆ ಭೇಟಿ ನೀಡಿ ಸ್ವಾಗತಿಸಿದರು. ನಿಯೋಗದಲ್ಲಿ ಸುದರ್ಶನ್ ಮೆಲ್ಕಾರ್, ಖಾಲಿದ್ ನಂದಾವರ, ಉದಯ, ರೂಪೇಶ್ ಮೊದಲಾದವರಿದ್ದರು.
0 comments:
Post a Comment