ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ವಿಜಯ ಕುಮಾರ್ ಮರು ಆಯ್ಕೆ - Karavali Times ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ವಿಜಯ ಕುಮಾರ್ ಮರು ಆಯ್ಕೆ - Karavali Times

728x90

12 June 2022

ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ವಿಜಯ ಕುಮಾರ್ ಮರು ಆಯ್ಕೆ

ಬಂಟ್ವಾಳ, ಜೂನ್ 12, 2022 (ಕರಾವಳಿ ಟೈಮ್ಸ್) : ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಇದರ 2022-23ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿಜಯಕುಮಾರ್ ಮರು ಆಯ್ಕೆಯಾಗಿದ್ದಾರೆ. 

ಭಾನುವಾರ (ಜೂನ್ 12) ಅಲೆತ್ತೂರು ಮಂಗಳಾ ಭವನದಲ್ಲಿ ನೇಮಿರಾಜ ಶೆಟ್ಟಿ ಕೊಡಂಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಸ್ಥೆಯ 42ನೇ ವಾರ್ಷಿಕ ಮಹಾಸಭೆಯಲ್ಲಿ ಈ ಅವಿರೋಧ ಆಯ್ಕೆ ನಡೆದಿದೆ. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಬಿ ಮೋಹನ್ ಬಿ ಸಿ ರೋಡು, ಮೋನಪ್ಪ ಪೂಜಾರಿ ಅಲೆತ್ತೂರು ಭಾಗವಹಿಸಿದ್ದರು.  

ಉಪಾದ್ಯಕ್ಷರಾಗಿ ನಿತಿನ್ ಕುಮಾರ್, ಕಾರ್ಯದರ್ಶಿಯಾಗಿ ಪ್ರಶಾಂತ್, ಜೊತೆ ಕಾರ್ಯದರ್ಶಿಯಾಗಿ ಪವನ್ ಕುಲಾಲ್, ಸಂಘಟನನಾ ಕಾರ್ಯದರ್ಶಿಯಾಗಿ ಪುಪ್ಪರಾಜ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಯಾಗಿ ಅಕ್ಷಯ್, ಜೊತೆ ಕ್ರೀಡಾ ಕಾರ್ಯದರ್ಶಿಯಾಗಿ ಅಶ್ವಥ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ವಿಶ್ವನಾಥ ರೈ, ಭಾಸ್ಕರ್ ಕುಲಾಲ್, ತಾರಾನಾಥ್ ಶೆಟ್ಟಿ, ಯಶವಂತ ಶೆಟ್ಟಿ, ರಂಜಿತ್, ಕೀರ್ತಿರಾಜ್, ಗೌತಮ್ ಅವರನ್ನು ಆರಿಸಲಾಯಿತು. 

  • Blogger Comments
  • Facebook Comments

0 comments:

Post a Comment

Item Reviewed: ಅಲೆತ್ತೂರು ಮಂಗಳಾ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷರಾಗಿ ವಿಜಯ ಕುಮಾರ್ ಮರು ಆಯ್ಕೆ Rating: 5 Reviewed By: karavali Times
Scroll to Top