ಬಂಟ್ವಾಳ, ಜೂನ್ 02, 2022 (ಕರಾವಳಿ ಟೈಮ್ಸ್) : ಎಸ್ಕೆಎಸ್ಸೆಸ್ಸೆಫ್ ಪಾಣೆಮಂಗಳೂರು ಶಾಖಾ ಹಿರಿಯ ಸದಸ್ಯರೂ, ಸಹಚಾರಿ ಸಹಚಾರಿ ವಿಭಾಗದ ಅಧ್ಯಕ್ಷರೂ ಆಗಿರುವ ಉದ್ಯಮಿ ಹಾಜಿ ಪಿ ಬಿ ಅಹಮದ್ ನಿಧನಕ್ಕೆ ಪಾಣೆಮಂಗಳೂರು ಎಸ್ಕೆಎಸ್ಸೆಸ್ಸೆಫ್ ಶಾಖೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮಸೀದಿ ಆಡಳಿತ ಸಮಿತಿ, ಧಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷದ ಧುರೀಣರೂ ಆಗಿ ಸಾಮಾಜಿಕ ರಂಗದಲ್ಲಿ ತಮ್ಮನ್ನು ಜೀವನದ ಇಳಿ ವಯಸ್ಸಿನಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಹಾಜಿ ಪಿ ಬಿ ಅಹ್ಮದ್ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಅಗಲಿಕೆಯ ನೋವು ತಡೆಯುವ ಶಕ್ತಿ ಅವರ ಕುಟುಂಬಕ್ಕೂ, ಸಂಘಟನಾ ಸಹವರ್ತಿಗಳಿಗೂ ಸರ್ವಶಕ್ತನಾದ ಅಲ್ಲಾಹು ನೀಡುವುದರ ಜೊತೆಗೆ ಅವರ ಬರ್ಝಖೀ ಜೀವನವನ್ನು ಅಲ್ಲಾಹು ಸುಖಮಯಗೊಳಿಸಲಿ ಎಂದು ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಅವರು ಸಂತಾಪ ಸೂಚಕ ಹೇಳಿಕೆಯಲ್ಲಿ ಪ್ರಾರ್ಥಿಸಿದ್ದಾರೆ.
0 comments:
Post a Comment