ಬಂಟ್ವಾಳ, ಮೇ 18, 2022 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ವ್ಯಾಪ್ತಿಯ ಫರಂಗಿಪೇಟೆ ಸಮೀಪದ ಕಡೆಗೋಳಿ ದ್ವಾರದ ಬಳಿ ತುಂಬೆ ಗ್ರಾಮದ ರೊಟ್ಟಿಗುಡ್ಡೆ ನಿವಾಸಿ ನಫೀಲ್ (18) ಅವರು ಬೈಕ್ ನಿಲ್ಲಿಸಿ ಮೊಬೈಲ್ ಫೋನಿನಲ್ಲಿ ಮಾತನಾಡುತ್ತಿದ್ದ ವೇಳೆ ಮೂರು ಮಂದಿ ಯುವಕರ ತಂಡ ಅವ್ಯಾಚ್ಯ ಶಬ್ದಗಳಿಂದ ಬೈದು, ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ವೇಳೆ ನಫೀಲ್ ಕೆಲಸ ಮುಗಿಸಿಕೊಂಡು ಪರಂಗಿಪೇಟೆಯಿಂದ ಮೋಟಾರು ಸೈಕಲಿನಲ್ಲಿ ಹೋಗುತ್ತಿದ್ದಾಗ ಕಡೆಗೋಳಿ ದ್ವಾರ ತಲುಪಿದಾಗ ಹುಸೈನ್ ಎಂಬವರ ದೂರವಾಣಿ ಕರೆಗೆ ಪ್ರತಿಕ್ರಯಿಸಿ ಬೈಕನ್ನು ನಿಲ್ಲಿಸಿ ಮೊಬೈಲಿನಲ್ಲಿ ಮಾತನಾಡಿಕೊಂಡಿದ್ದ ವೇಳೆ ಕಡೆಗೋಳಿ ಪರಿಸರದ ನೋಡಿದರೆ ಪರಿಚಯ ಗೊತ್ತಾಗುವ ಮೂರು ಜನ ಯುವಕರು ನಫೀಲ್ ಬಳಿ ಬಂದು ಮೊಬೈಲ್ ಎಳೆಯಲು ನೋಡಿ ನಮ್ಮ ಏರಿಯಾದಲ್ಲಿ ಇಷ್ಟು ಹೊತ್ತಿಗೆ ನಿನಗೆ ಎನೂ ಕೆಲಸ ಎಂದು ಹೇಳಿ ಆತನ ಅಂಗಿಯನ್ನು ಹಿಡಿದು ಅಲ್ಲಿಯೇ ಇದ್ದ ಅಂಗಡಿಯೊಂದರ ಬಳಿಗೆ ಕರೆದುಕೊಂಡು ಹೋಗಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಬೇವರ್ಸಿ ಸೂಳೆಮಗನೇ ಎಂದು ಅವಾಚ್ಯ ಶಬ್ದಗಳಿಂದ ಬೈದು ಮೂರೂ ಮಂದಿ ಸೇರಿ ಕೈಯಿಂದ ಹಲ್ಲೆ ನಡೆಸಿ ಮತ್ತೋರ್ವ ಅಲ್ಲಿಯೇ ಇದ್ದ ಮರದ ತುಂಡಿನಿಂದ ನಫೀಲನ ಮುಖ, ಕೆನ್ನೆ, ಎದೆಯ ಭಾಗ, ತಲೆ ಹಾಗೂ ಕುತ್ತಿಗೆಗೆ ಹಲ್ಲೆ ಮಾಡಿರುತ್ತಾರೆ. ಹಲ್ಲೆ ನಡೆಸಿದ ಮೂವರೂ ಹುಡುಗರು ತುಳುವಿನಲ್ಲಿ ಬೈಯುತ್ತಿದ್ದು, ಅದೇ ಪರಿಸರದವರಾಗಿದ್ದು ನೋಡಿದರೆ ಗುರುತಿಸುವವರಾಗಿರುತ್ತಾರೆ ಎಂದು ನಫೀಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 34/2022 ಕಲಂ 504, 506, 323, 324 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment