ಗೂಡಿನಬಳಿ : ನೇತ್ರಾವತಿ ನದಿಗೆ ಹಾರಿ ವೃದ್ದೆ ಆತ್ಮಹತ್ಯೆ - Karavali Times ಗೂಡಿನಬಳಿ : ನೇತ್ರಾವತಿ ನದಿಗೆ ಹಾರಿ ವೃದ್ದೆ ಆತ್ಮಹತ್ಯೆ - Karavali Times

728x90

21 May 2022

ಗೂಡಿನಬಳಿ : ನೇತ್ರಾವತಿ ನದಿಗೆ ಹಾರಿ ವೃದ್ದೆ ಆತ್ಮಹತ್ಯೆ

ಬಂಟ್ವಾಳ, ಮೇ 21, 2022 (ಕರಾವಳಿ ಟೈಮ್ಸ್) : ತಾಲೂಕಿನ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಸಮೀಪ ನೇತ್ರಾವತಿ ನದಿಗೆ ಹಾರಿ ವೃದ್ದೆಯೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಗೂಡಿನಬಳಿ ಹಳೆ ನೇತ್ರಾವತಿ ಸೇತುವೆ ಸಮೀಪ ಈ ಕೃತ್ಯ ನಡೆದಿದ್ದು, ಸ್ಥಳೀಯ ಈಜುಪಟು ಯುವಕರು ತಕ್ಷಣ ಕಾರ್ಯಪ್ರವೃತ್ತರಾಗಿ ಮಹಿಳೆಯನ್ನು ನೀರಿನಿಂದ ಮೇಲಕ್ಕೆತ್ತಿದ್ದರಾದರೂ ಅದಾಗಲೇ ಮಹಿಳೆ ಮೃತಪಟ್ಟಿದ್ದಾರೆ. ಬಂಟ್ವಾಳ ದೇವಸ್ಥಾನದ ಸಮೀಪದ ನಿವಾಸಿ ಮಹಿಳೆ ಎನ್ನಲಾಗಿದ್ದು, ಸುಮಾರು 60 ವರ್ಷ ಪ್ರಾಯದವರಾಗಿದ್ದಾರೆ. ಯಾವ ಕಾರಣಕ್ಕೆ ಈ ಕೃತ್ಯಕ್ಕೆ ಮುಂದಾಗಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದಷ್ಟೆ ತಿಳಿದು ಬರಬೇಕಿದೆ. 

ಗೂಡಿನಬಳಿ ಈಜುಪಟು ತಜ್ಞ ಮುಹಮ್ಮದ್ ಮಮ್ಮು ನೇತೃತ್ವದ ಯುವಕರಾದ ಇರ್ಷಾದ್, ಯಾಸೀರ್, ಮುಝೈನ್ (ಮುಝೀ), ಸತ್ಯ, ಇಬ್ರಾಹಿಂ, ಹಾರಿಸ್ ಅವರ ತಂಡ ಮೃತದೇಹವನ್ನು ನದಿಯಿಂದ ಮೇಲಕ್ಕೆತ್ತುವಲ್ಲಿ ಸಹಕರಿಸಿದರು. 

  • Blogger Comments
  • Facebook Comments

0 comments:

Post a Comment

Item Reviewed: ಗೂಡಿನಬಳಿ : ನೇತ್ರಾವತಿ ನದಿಗೆ ಹಾರಿ ವೃದ್ದೆ ಆತ್ಮಹತ್ಯೆ Rating: 5 Reviewed By: karavali Times
Scroll to Top