ಪುತ್ತೂರು, ಮೇ 01, 2022 (ಕರಾವಳಿ ಟೈಮ್ಸ್) : ಇಲ್ಲಿನ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 40/13 ಕಲಂ 457, 380 ಐಪಿಸಿ ಹಾಗೂ ಅಪರಾಧ ಕ್ರಮಾಂಕ 34/13 ಕಲಂ 454, 380, 53/14 ಕಲಂ 454, 380 ಐಪಿಸಿ ಪ್ರಕರಣದ ಸಂಬಂಧ ನ್ಯಾಯಾಲಯದ ಸಿಸಿ ಸಂಖ್ಯೆ 1659/15,12 40/15 ಹಾಗೂ 3534/18 ಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಕೇರಳ ರಾಜ್ಯದ ಕಾಸರಗೋಡು ತಾಲೂಕು, ಚಟ್ಟಂಗಲ್ ಗ್ರಾಮದ, ಅಯ್ಯಪ್ಪ ಭಜನಾ ಮಂದಿರ ಬಳಿ ನಿವಾಸಿ ದಿವಂಗತ ಅಹಮದ್ ಅವರ ಪುತ್ರ ಮಹಮ್ಮದ್ ಕಬೀರ್ ಅಲಿಯಾಸ್ ಕಬೀರ್ ಎಂಬಾತನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಠಾಣಾ ಉಪನೀರಿಕ್ಷಕರಾದ ಉದಯ ರವಿ ಮತ್ತು ಅಮಿನ್ ಸಾಬ್ ಅತ್ತಾರ್ ಅವರ ಸಲಹೆಯಂತೆ ಪುತ್ತೂರು ಗ್ರಾಮಾಂತರ ಠಾಣಾ ಎಚ್ ಸಿಗಳಾದ ಧರ್ಮಪಾಲ, ಕೃಷ್ಣಪ್ಪ, ಪಿ ಸಿ ಗಳಾದ ಶಿವಾನಂದ ಕೆ, ಗಿರೀಶ್ ಅವರು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಆತನ ಮನೆಯಿಂದಲೇ ದಸ್ತಗಿರಿ ಮಾಡುವಲ್ಲಿ ಸಫಲರಾಗಿದ್ದಾರೆ.
ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿ ವಿರುದ್ದ ಪುತ್ತೂರು ನಗರ ಠಾಣೆ, ಸುಳ್ಯ, ಮಡಿಕೇರಿ, ಕೇರಳ ಠಾಣೆಗಳಲ್ಲಿ ಪ್ರಕರಣಗಳು ಇರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment