ಬಂಟ್ವಾಳ, ಮೇ 11, 2022 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪದ ಕನ್ಯಾನ ಗ್ರಾಮದ ನಂದರಬೆಟ್ಟು ಎಂಬಲ್ಲಿ ಅಣ್ಣ ಐತಪ್ಪ ನಾಯ್ಕ (40) ಎಂಬವರು ತನ್ನ ತಮ್ಮನಾದ ಬಾಳಪ್ಪ ನಾಯ್ಕ (35) ಎಂಬವರನ್ನು ಬಡಿಗೆಯಿಂದ ಬಡಿದು ಕೊಲೆಗೈದ ಘಟನೆ ಮಂಗಳವಾರ ನಡೆದಿದೆ.
ಇಬ್ಬರೂ ಕೂಡಾ ಕುಡಿತದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡು ಬಳಿಕ ಜಗಳ ತಾರಕಕ್ಕೇರಿ ಅಂತಿಮವಾಗಿ ಓರ್ವನ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ ಎನ್ನಲಾಗಿದ್ದು, ಘಟನೆಯ ಸ್ಪಷ್ಟ ಚಿತ್ರಣ ತಕ್ಷಣಕ್ಕೆ ಗೊತ್ತಾಗಿಲ್ಲ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
0 comments:
Post a Comment